Thursday, July 7, 2022

Latest Posts

ಡಿಜೆಹಳ್ಳಿ ಗಲಭೆ ಪ್ರಕರಣ ಸಿಬಿಐಗೆ ವಹಿಸುವ ಪ್ರಶ್ನೆಯೇ ಇಲ್ಲ: ಡಾ. ಅಶ್ವತ್ಥನಾರಾಯಣ್

ಕೆ.ಆರ್. ಪೇಟೆ: ಬೆಂಗಳೂರಿನ ಡಿ.ಜಿ. ಹಳ್ಳಿ ಹಾಗೂ ಕೆ.ಜಿ. ಹಳ್ಳಿ ಗಲಭೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಪ್ರಶ್ನೆಯೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಸ್ಪಷ್ಟಪಡಿಸಿದರು.
ಪಟ್ಟಣದ ಬಿಜೆಪಿ ನಾಯಕ ಅಘಾಲಯ ಮಂಜುನಾಥ್ ಅವರ ಮನೆಗೆ ಖಾಸಗೀ ಭೇಟಿ ನೀಡಿದ್ದ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿ ಎನ್ನುವುದು ಅವರ ಬೇಡಿಕೆ. ಅವರ ಅಪೇಕ್ಷೆಯನ್ನು ತಿಳಿಸಿದ್ದಾರೆ. ಆದರೆ ನವೀನ್ ಎಂಬ ಯುವಕ, ನಾನು ಕಾಂಗ್ರೆಸ್ ಕಾರ್ಯಕರ್ತ ನಾನೇ ಆ ಪೆÇೀಸ್ಟ್ ಹಾಕಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾನೆ. ಅದಕ್ಕೆ ಉತ್ತರ ಕೊಡುವುದಕ್ಕೆ ಬೇರೆಯದ್ದೇ ದಾರಿ ಇತ್ತು. ಆದರೆ ಕಾನೂನನ್ನು ಕೈಗೆತ್ತಿಕೊಳ್ಳಬಾರದಿತ್ತು. ಸರ್ಕಾರ ತಕ್ಷಣವೇ ಸ್ಪಂಧಿಸಿ ಕಾನೂನು ಸುವ್ಯವಸ್ಥೆ ಕಾಪಾಡಿದ್ದು, ಗಲಭೆಕೋರರ ವಿರುದ್ಧ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಗಲಭೆ ಪ್ರಕರಣಕ್ಕೆ ಕಾಂಗ್ರೆಸ್‍ನ ಒಳ ಜಗಳವೇ ಕಾರಣ ಎಂದು ಈಗ ಬಹಿರಂಗವಾಗಿದೆ. ಸರ್ಕಾರ ಪ್ರಕರಣದ ತನಿಖೆಯನ್ನು ಸಿಸಿಬಿಗೆ ಒಪ್ಪಿಸಿದ್ದು, ಅದರ ಮೂಲಕವೇ ತನಿಖೆ ನಡೆಯುತ್ತದೆ. ಸಿಬಿಐಗೆ ವಹಿಸುವುದಿಲ್ಲ ಎಂದು ಹೇಳಿದರು.
ಗಲಭೆ ಹಿಂದೆ ಎಸ್‍ಡಿಪಿಐ ಹಾಗೂ ಪಿಎಫ್‍ಐ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಘಟನೆಗಳ ನಿಷೇದಕ್ಕೆ ತೀವ್ರ ಒತ್ತಡ ಕೇಳಿಬರುತ್ತಿದೆ. ಇವುಗಳನ್ನು ನಿಷೇದ ಮಾಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ ಎಂದ ಅವರು, ಕಾಂಗ್ರೆಸ್ ಸರ್ಕಾರ ಇವರ ಮೇಲಿದ್ದ ಪ್ರಕರಣಗಳನ್ನು ವಜಾ ಮಾಡಿದ್ದರಿಂದಲೇ ಸಮಸ್ಯೆಯಾಗಿದೆ. ಇವುಗಳ ಬಗ್ಗೆ ಸಾಕ್ಷ್ಯಾಧಾರಗಳನ್ನು ಪಡೆದು ನಿಷೇದ ಮಾಡುವ ಕೆಲಸ ಮಾಡುತ್ತೇವೆ ಎಂದು ವಿವರಿಸಿದರು.
ಎಸ್‍ಡಿಪಿಐ-ಕಾಂಗ್ರೆಸ್ ನಡುವಿನ ಪೈಪೋಟಿ, ಒಳ ಜಗಳವೇ ಗಲಭೆಗೆ ಮೂಲ ಕಾರಣ. ಇವೆರಡೂ ಸೌಹಾರ್ಧತೆಯನ್ನು ಹಾಳು ಮಾಡುವ ಪ್ರಯತ್ನ ಮಾಡುತ್ತಿದ್ದು, ಕಾನೂನಾತ್ಮಕವಾಗಿ ಕ್ರಮ ವಹಿಸುವುದಾಗಿ ಹೇಳಿದರು.
ಎಸ್‍ಪಿಡಿಐ ಹಾಗೂ ಪಿಎಫ್‍ಐಗಳಿಂದ ತಾರ್ಗೆಟೆಡ್ ಕಿಲ್ಲಿಂಗ್ ತಂತ್ರ ನಡೆಯುತ್ತಿದೆ. ಇದು ಹಿಂದಿನಿಂದಲೂ ನಡೆಯುತ್ತಿದ್ದು, ತನ್ವೀರ್‍ಶೇಠ್ ಮೇಲಿನ ಕೊಲೆ ಯತ್ನ ಹಾಗೂ ಮಡಿಕೇರಿ ಪ್ರಕರಣಗಳೇ ಇದಕ್ಕೆ ಉದಾಹರಣೆಯಾಗಿದೆ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss