Friday, July 1, 2022

Latest Posts

ಡಿಜೆ‌ಹಳ್ಳಿ ಕೆಜಿ ಹಳ್ಳಿ ಗಲಭೆ: ಡಿಜೆ ಠಾಣೆ ಎದುರು ಬಂಧಿತರ ಕುಟುಂಬಸ್ಥರ ಹೈಡ್ರಾಮಾ!

ಬೆಂಗಳೂರು: ಡಿಜೆ‌ಹಳ್ಳಿ ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಡಿಜೆ ಠಾಣೆ ಎದುರು ಬಂಧಿತರ ಕುಟುಂಬಸ್ಥರು ಹೈಡ್ರಾಮಾ ನಡೆಸಿದ್ದಾರೆ.
ಪೊಲೀಸರು 300ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಿದ್ದಾರೆ. ಇಂತಹ ಬಂಧಿತರಲ್ಲಿ ಅನೇಕರು ಅಮಾಯಕರು, ಅವರನ್ನು ಬಿಟ್ಟು ಬಿಡುವಂತೆ ಆರೋಪಿಗಳ ಪೋಷಕರು ಡಿಜೆ ಹಳ್ಳಿ, ಕೆಜಿ ಹಳ್ಳಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.
50ಕ್ಕೂ ಹೆಚ್ಚು ಮಹಿಳೆಯರು ಸೇರಿಕೊಂಡು ಬಂಧಿತರ ಭಾವ ಚಿತ್ರ ಹಿಡಿದು ಇವರೆಲ್ಲರೂ ಅಮಾಯಕರು, ಅವರನ್ನು ದಯವಿಟ್ಟು ಬಿಟ್ಟು ಬಿಡಿ ಎಂದು ಪೊಲೀಸರಲ್ಲಿ‌ ಮನವಿ ಮಾಡುವ ಮೂಲಕಆರೋಪಿಗಳನ್ನು ಬಿಡುಗಡೆ ಮಾಡುವಂತೆ ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss