spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಡಿಸಿಐಬಿ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ: 28 ಲಕ್ಷ 50 ಸಾವಿರ ರೂ. ಮೌಲ್ಯದ 120 ಕೆ.ಜಿ ಗಾಂಜಾ ವಶಕ್ಕೆ

- Advertisement -Nitte

ಬೆಳಗಾವಿ: ಜಿಲ್ಲಾ ಅಪರಾಧ ತನಿಖಾ ತಂಡ (ಡಿಸಿಐಬಿ) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ 28 ಲಕ್ಷ 50 ಸಾವಿರ ರೂ. ಮೌಲ್ಯದ 120 ಕೆ.ಜಿ ಗಾಂಜಾ ವಶಪಡಿಸಿಕೊಂಡು ಆರೋಪಗಳನ್ನು ಬಂಧಿಸಿ ಅವರಿಂದ ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಮಹಾರಾಷ್ಟ್ರದ ಮೀರಜ್ ಮೂಲದ ಡ್ರಗ್ ಪೆಡ್ಲರ್ ಆಶ್ಪಕ್ ಮುಲ್ಲಾ ಬಂಧಿತ ಆರೋಪಿ. ಮೀರಜ್ ತಾಲೂಕಿನ ಮೈಶಾಳ ಗ್ರಾಮದ ಹೊರವಲಯದ ಪಂಪಹೌಸ್ ಹತ್ತಿರ ಆರೋಪಿಯನ್ನು ಡಿಸಿಐಬಿ ‌ತಂಡ ಬಂಧಿಸಿದೆ‌. 2 ಕೆಜಿ ತೂಕದ 60 ಗಾಂಜಾ ಪಾಕೆಟ್, ಸ್ವಿಫ್ಟ್ ಕಾರು, ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಕಾರನ
ಡಿಕ್ಕಿಯಿಂದ 40 ಕೆ ಜಿ ಗಾಂಚಾ ಪ್ಯಾಕೆಟಗಳನ್ನು ಮತ್ತು ಮೈಶಾಳ ಜತ್ರ ನೀರು ಸರಬರಾಜು ಮಾಡುವ ಪಂಪ ಹೌಸ್ ಹತ್ತಿರ ಸಂಗ್ರಹಿಸಿಟ್ಟಿದ್ದ 78 ಕೆಜಿ ತೂಕದ ಗಾಂಜಾ ಪ್ಯಾಕೆಟಗಳನ್ನು ಡಿಸಿಐಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತೆಲಂಗಾಣದ ವಾರಂಗಲ್ ಮತ್ತು ಹೈದರಾಬಾದ್​ ನಿಂದ ಗಾಂಜಾ ಖರೀದಿಸಿ ಈತ ಮಹಾರಾಷ್ಟ್ರದ ಸಾಂಗ್ಲಿ, ಮೀರಜ್, ಬೆಳಗಾವಿ, ಧಾರವಾಡಕ್ಕೆ ಪೂರೈಸುತ್ತಿದ್ದನು ಎಂದು ತನಿಖೆಯ ಸಮಯದಲ್ಲಿ ಹೇಳಿದ್ದಾನೆಂದು ತಿಳಿದು ಬಂದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಬೆಳಗಾವಿ ಡಿಸಿಐಬಿ ತಂಡ ಆರೋಪಿಯನ್ನು ಬಂಧಿಸಿದೆ. ಆರೋಪಿ ಆಶ್ಪಕ್ ಗೆ ಗಾಂಜಾ ಪೂರೈಸುತ್ತಿದ್ದ ತೆಲಂಗಾಣದ ಇಬ್ಬರಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಅರೋಪಿಗಳನ್ನು ಬಂಧಿಸಿರುವ ಡಿಸಿಐಬಿ ಸಿಪಿಐ ನಿಂಗನಗೌಡಾ ಪಾಟೀಲ, ಎಎಸ್ಐ ಡಿ.ಕೆ‌. ಪಾಟೀಲ, ಸಿಬ್ಬಂದಿಗಳಾದ ಅರ್ಜುನ ಮಸಗುಪ್ಪಿ, ವಿ.ವಿ. ಗಾಯಕವಾಡ, ಟಿ. ಕೆ. ಕೊಳಚಿ, ಎಲ್ ಟಿ ಪವಾರ, ಜಯರಾಮ ಹಮ್ಮನ್ನವರ, ಎಸ್ ಎಮ್ ಮಂಗಣ್ಣವರ ಅವರನ್ನು
ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ‌ ಲಕ್ಷ್ಮಣ ನಿಂಬರಗಿ ಅವರು ಅಭಿನಂಧಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss