ಹೊಸದಿಗಂತ ಆನ್ಲೈನ್ ಡೆಸ್ಕ್:
ಬೆಳಗಾವಿ ಜಿಲ್ಲಾ ಮಧ್ಯವರ್ತಿ (ಬಿಡಿಸಿಸಿ) ಬ್ಯಾಂಕ್ನ ಚುನಾವಣಾ ಇತಿಹಾಸದಲ್ಲಿಯೇ ಈ ಸಲಾ ಜಿದ್ದಾ ಜಿದ್ದಿನ ಅಖಾಡ ಸಿದ್ಧವಾಗಿದ್ದು ಶುಕ್ರವಾರ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಮಹಾನಗರದ ಬಿ.ಕೆ.ಮಾಡಲ್ ಶಾಲೆಯಲ್ಲಿ ಮತದಾನ ನಡೆಯುತ್ತಿದೆ.
ಡಿಸಿಸಿ ಬ್ಯಾಂಕಿನ ಮೂರು ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದ್ದು. ಖಾನಾಪುರ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ತೀವ್ರ ಫೈಟ್ ಏರ್ಪಟ್ಟಿದೆ. 16 ನಿರ್ದೇಶಕರ ಸ್ಥಾನಗಳ ಪೈಕಿ ಈಗಾಗಲೇ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.
ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳಕರ ಮತ್ತು ಎಂಇಎಸ್ ನ ಮಾಜಿ ಶಾಸಕ ಅರವಿಂದ ಪಾಟೀಲ ಮಧ್ಯೆ ನೇರ ಹಣಾಹಣಿ ನಡೆದಿದ್ದು. ಬಿಜೆಪಿ ನಾಯಕರಾದ ಲಕ್ಷ್ಮಣ ಸವದಿ, ಕತ್ತಿ ಹಾಗೂ ಜಾರಕಿಹೊಳಿ ಸಹೋದರರಿಗೆ ಶಾಸಕಿ ಅಂಜಲಿ ನಿಂಬಾಳಕರ ಸೆಡ್ಡು ಹೊಡೆದಿದ್ದು, ಬಿಜೆಪಿ ಘಟಾನುಘಟಿ ನಾಯಕರು ಮಾಜಿ ಶಾಸಕ ಅರವಿಂದ ಪಾಟೀಲಗೆ ಬೆಂಬಲ ಸೂಚಿಸಿದ್ದಾರೆ.
ಶುಕ್ರವಾರ ಸಂಜೆ 4 ಗಂಟೆಯವರೆಗೆ ಮೂರು ಸ್ಥಾನಗಳಿಗೆ ಮತದಾನ ನಡೆಯಲ್ಲಿದ್ದು, ನಂತರ ಮತ ಎಣಿಕೆಯ ಕಾರ್ಯ ನಡೆಯಲಿದೆ.