ಹೊಸ ದಿಗಂತ ಆನ್ ಲೈನ್ ಡೆಸ್ಕ್:
ರಾಜ್ಯದಲ್ಲಿ ಈ ವರ್ಷದ ಕೊನೆಯವರೆಗೂ ಶಾಲೆ ಆರಂಭ ಇಲ್ಲ. 1 ರಿಂದ ಪಿಯುಸಿ ವರೆಗೆ ಯಾವುದೇ ತರಗತಿಗಳು ನಡೆಯಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಇಂದು ಶಾಲೆ ಆರಂಭದ ಕುರಿತಂತೆ ಮುಖ್ಯ ಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆಸಿದ ಮಹತ್ವದ ಸಭೆಯಲ್ಲಿ ಡಿಸೆಂಬರ್ ಕೊನೆಯವರೆಗೂ ಶಾಲೆ ಆರಂಭ ಇಲ್ಲ. ಚಳಿಗಾಲದ ಸಮಯದಲ್ಲಿ ಕೊರೋನಾ ಹೆಚ್ಚಳ ಸಾಧ್ಯತೆ ಇದೆ. ಹೀಗಾಗಿ ಈ ವರ್ಷ ಶಾಲೆ ಆರಂಬಿಸುವುದಿಲ್ಲ ಎಂದು ಸಿಎಂ ಹೇಳಿದ್ದಾರೆ.
ಕೋವಿಡ್-19 ತಜ್ಞರ ಅಭಿಪ್ರಾಯ ಪರಿಗಣಿಸಿ ಡಿಸೆಂಬರ್ ವರೆಗೂ ಶಾಲೆ ತೆರೆಯದಿರಲು ನಿರ್ಧರಿಸಲಾಗಿದೆ. ಶಾಲೆ ಆರಂಭಿಸುವ ಬಗ್ಗೆ ಡೆಸೆಂಬರ್ ಕೊನೆಯಲ್ಲಿ ಮತ್ತೊಂದು ಸಭೆ ಕೈಗೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು.