Friday, July 1, 2022

Latest Posts

ಡಿಸೇಲ್ ಬೆಲೆ ಹೆಚ್ಚಳ: ಉಳುಮೆ ಮಾಡಲಾಗದೆ ಸಂಕಷ್ಟಕ್ಕೆ ಎದುರಾದ ರೈತ ಸಮುದಾಯ

ಕೊರೋನಾ ಮಹಾಮಾರಿಯಿಂದ ಈಗಾಗಲೇ ಕಂಗೆಟ್ಟಿದ್ದ ರೈತ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾನೆ. ಲಾಕ್‌ಡೌನ್‌ನಿಂದಾಗಿ ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ, ಅದನ್ನೂ ಮಾರಾಟ ಮಾಡಲೂ ಆಗಿರಲಿಲ್ಲ. ಆದರೆ ಈಗ ಮುಂಗಾರು ಆರಂಭವಾಗಿದ್ದು, ರೈತ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾನೆ.
ಹೊಲವನ್ನು ಹದ ಮಾಡಿ ಬಿತ್ತನೆ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದ್ದು, ಡಿಸೇಲ್ ಬೆಲೆ ಏರಿಕೆಯಾಗಿರುವುದು ರೈತ ಸಮುದಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ೧೫ ದಿನದಿಂದಲೂ ಡಿಸೇಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಉಳುಮೆ ಮಾಡಲು ಟ್ರಾಕ್ಟರ್ ಅವಶ್ಯವಾಗಿದ್ದು, ಉಳುಮೆ ಮಾಡುವುದು ಕೂಡ ದುಬಾರಿಯಾಗಿದೆ. ಇದರ ಜೊತೆಗೆ ದೈನಂದಿನ ವಸ್ತುಗಳ ಬೆಲೆಯೂ ಏರಿಕೆ ಆಗುವ ಸಾಧ್ಯತೆ ಇದೆ. ಕೊರೋನಾ ಸಂಕಷ್ಟ  ರೈತರಿಗೆ ಶಾಪವಾಗಿ ಪರಿಣಮಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss