spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, September 28, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಡೆತ್ ನೋಟ್ ಬರೆದಿಟ್ಟು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾದ ದಂಪತಿ

- Advertisement -Nitte

ಹೊಸ ದಿಗಂತ ವರದಿ, ಬಳ್ಳಾರಿ:

ನಮ್ಮ ಸಾವಿಗೆ ನಾವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು, ತಮ್ಮಿಬ್ಬರ ಮಕ್ಕಳನ್ನು ಸಾಯಿಸಿ ದಂಪತಿಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಬುಧವಾರ ನಡೆದಿದೆ.
ಜಿಂದಾಲ್ ಕಾರ್ಖಾನೆಯ ಉದ್ಯೋಗಿಯಾಗಿರುವ ಗಾಣಿಗೇರ ನಂಜುಂಡಪ್ಪ (30), ಪತ್ನಿ ಪಾರ್ವತಿ (28) ಮತ್ತು ಅವರ ಮಕ್ಕಳಾದ ದಯಸ್ವರೂಪ (4) ಹಾಗೂ ಗೌತಮಿ (2) ಸಾವನ್ನಪ್ಪಿದವರು.ಡೆತ್ ನೋಟಿನಲ್ಲಿ ಸಂಕಷ್ಟದಲ್ಲಿದ್ದ ನಮಗೆ ಹಲವರು ಸಹಾಯ ಮಾಡಲು ಬಂದಿದ್ದರು. ಆದರೂ ಬಗೆಹರಿಯದ ಸಂಕಟದಿಂದ ನಾವು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ.
ನಮ್ಮ ಕುಟುಂಬದವರೆಲ್ಲ ನಮ್ಮ ನಿರ್ಧಾರವನ್ನು ಕ್ಷಮಿಸುತ್ತಿರೋ ಇಲ್ಲವೋ ಆದರೂ ನಮ್ಮ ಕಾಳಜಿ, ಸೇವೆಗೆ ಧನ್ಯವಾದಗಳು. ಆದರೂ ನಾವು ಸಾವಿಗೆ ನಿರ್ಧಾರ ಮಾಡಿಕೊಂಡಿದ್ದು ಸ್ವಯಂ ಪ್ರೇರಿತರಾಗಿ ನಮ್ಮ ಮತ್ತು ಮಕ್ಕಳ ಸಾವಿಗೆ ಯಾರೂ ಕಾರಣರಲ್ಲ.
ಗಂಡ ಹೆಂಡತಿ ಇಬ್ಬರು ಸಹಿ ಮಾಡಿದ್ದೇವೆ ಎoದು ಡೆತ್ ನೊಟ್ ನಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಗಾದಿಗನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಯಲ್ಲಿ ನಾಲ್ವರು ಮಾತ್ರ ವಾಸ ಮಾಡುತ್ತಿದ್ದರು. ನಂಜುಂಡಪ್ಪ ಅವರು ಕ್ರಿಕೆಟ್ ಬೆಟ್ಟಿಂಗ್ ಹವ್ಯಾಸವಿತ್ತು. ಸಾಕಷ್ಡು ಸಾಲ ಮಾಡಿಕೊಂಡಿದ್ದರು ಎಂದು ಅವರ ಕುಟುಂಬದವರೋಬ್ಬರು ಮಾಹಿತಿ ನೀಡಿದ್ದಾರೆ. ಆದರೇ, ಈ ಘಟನೆ ಕುರಿತು ತನಿಖೆಯಿಂದಲೇ ಸತ್ಯಾಂಶ ಹೊರಬರಬೇಕಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss