ಹೊಸದಿಗಂತ ಆನ್ಲೈನ್ ಡೆಸ್ಕ್:
ಕೊರೋನಾ ಮಾರ್ಗಸೂಚಿಗೆ ಬೆಲೆ ಕೊಡದೇ ಪಾರ್ಟಿ ಮಾಡಿದ್ದ ಬೆಂಗಳೂರಿನ ಅಪಾರ್ಟ್ಮೆಂಟ್ ಒಂದರ ಮಂದಿ ಇದೀಗ ಕೋವಿಡ್ ಅತಿಥಿಗಳಾಗಿದ್ದಾರೆ.
ಬೊಮ್ಮನಹಳ್ಳಿಯ ಎಸ್ಎನ್ಎನ್ ರಾಜ್ ಲೇಕ್ ವ್ಯೂ ಅಪಾರ್ಟ್ಮೆಂಟ್ನ 103 ಮಂದಿಗೆ ಕೊರೋನಾ ಸೋಂಕು ತಗುಲಿದೆ.
ಫೆ.6 ರಂದು ಡೆಹ್ರಾಡೂನ್ನಿಂದ ಆಗಮಿಸಿದವರೊಂದಿಗೆ ಅಪಾರ್ಟ್ಮೆಂಟ್ನ ಸದಸ್ಯರು ಭರ್ಜರಿ ಮೋಜು,ಮಸ್ತಿ ಪಾರ್ಟಿ ಮಾಡಿದ್ದರು.
ಡೆಹ್ರಾಡೂನ್ನಿಂದ ಆಗಮಿಸಿದವರಿಗೆ ಕೊರೋನಾ ಸೋಂಕು ಕಾಣಿಸಿದ್ದು, ನಂತರ ಪಾರ್ಟಿಗೆ ಬಂದವರಲ್ಲಿಯೂ ಸೋಂಕು ಕಾಣಿಸಿದೆ. 103 ಮಂದಿಗೆ ಸೋಂಕು ಕಾಣಿಸಿದ್ದು,ಇದರಲ್ಲಿ 90 ಮಂದಿಗೆ 65 ಕ್ಕಿಂತ ಹೆಚ್ಚು ವಯಸ್ಸಾಗಿದೆ. ಫ್ಲಾಟ್ನ ಉಳಿದ ಎಲ್ಲಾ ಮಂದಿಗೂ ಕೊರೋನಾ ಪರೀಕ್ಷೆ ಮಾಡಲಾಗಿದೆ.