Tuesday, August 16, 2022

Latest Posts

ಡೈಲಾಗ್ ತಪ್ಪಿನಿಂದ ಎರಡು-ಮೂರು ಸಲ ಎಸ್ಪಿಬಿ ನದಿಯಲ್ಲಿ ಮುಳುಗಬೇಕಾಯ್ತು !

ಶ್ರೀರಂಗಪಟ್ಟಣ: ಎಸ್.ಪಿ.ಬಾಲಸುಬ್ರಹ್ಮಣ್ಯ ಅಷ್ಟು ದೊಡ್ಡ ಗಾಯಕನಾದರೂ ಅವರಲ್ಲಿ ಸ್ವಲ್ಪವೂ ಗರ್ವವಿಲ್ಲದೆ ಮುಗ್ಧತೆಯಿಂದಿದ್ದರು ಅವರ ನಿಷ್ಠೆಗೆ ಮನಸೋತಿದ್ದೇನೆ ಎಂದು ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ತಿಳಿಸಿದ್ದಾರೆ.
1995ರಲ್ಲಿ ತೆರಕಂಡ ‘ಬಾಳೊಂದು ಚದುರಂಗ’ ಚಿತ್ರದ ಚಿತ್ರಿಕರಣದ ವೇಳೆ ಬಾಲಸುಬ್ರಹ್ಮಣ್ಯರವರೊಂದಿಗೆ ಸಹನಟನಾಗಿ ಅಭಿನಯಿಸಿರುವ ಭಾನುಪ್ರಕಾಶ್ ಶರ್ಮಾರವರು, ಪಶ್ಚಿಮವಾಹಿನಿಯ ಕಾವೇರಿ ನದಿಯಲ್ಲಿ ಅಸ್ತಿ ಬಿಡುವ ಚಿತ್ರನವನ್ನು ಚಿತ್ರೀಕರಿಸುತ್ತಿದ್ದ ವೇಳೆ ನನ್ನ ಡೈಲಾಗ್ ತಪ್ಪಿನಿಂದಾಗಿ ಬಾಲಸುಬ್ರಹ್ಮಣ್ಯ ರವರು ಎರಡು ಮೂರು ಸಲ ನೀರಿನಲ್ಲಿ ಮುಳುಗಬೇಕಾಯಿತು. ಆ ವೇಳೆ ಸ್ವಲ್ಪವೂ ಬೇಸರ ವ್ಯಕ್ತಪಡಿಸದೆ ನನಗೆ ಧೈರ್ಯ ತುಂಬಿದರಲ್ಲದೆ, ಮತ್ತೊಂದು ಸಲ ಮಾಡಿದರಾಯ್ತು ಎಂಬ ಮುಗ್ದ ಮನಸ್ಸಿನೊಂದಿಗೆ ನೀರಿನಲ್ಲಿ ಮುಳುಗಿ ಮುಳುಗಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಸನ್ನಿವೇಶವನ್ನು ನೆನೆದು ಅವರ ಆತ್ಮಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಷ್ಟು ದೊಡ್ಡ ಗಾಯಕ ಸ್ವಲ್ಪವೂ ಗರ್ವವಿಲ್ಲದೆ ಮುಗ್ಧತೆಯಿಂದ ಅಭಿನಯಿಸುತ್ತಿದ್ದದ್ದು ಇಂದಿನ ಇತರ ನಟರಿಗೆ ಸ್ಪೂರ್ತಿಯ ಚಿಲುಮೆ ಎಂದು ಭಾನುಪ್ರಕಾಶ್ ಶರ್ಮಾ ತಿಳಿಸಿದ್ದಾರೆ. ಆ ಚಿತ್ರದಲ್ಲಿ ಅಂಬರೀಶ್, ಸುಧರಾಣಿ, ಅರವಿಂದ್ ರಮೇಶ್ ಸೇರಿದಂತೆ ಇತರೆ ನಟರು ಅಭಿನಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss