Friday, July 1, 2022

Latest Posts

ಡೋಂಟ್ ವರಿ, ಕೊರೋನಾಗೆ ಶೀಘ್ರವೇ ಸಿಗಲಿದೆ ಸಖತ್ ಗುದ್ದು, ಬರಲಿದೆ ಮದ್ದು!!

ಲಂಡನ್: ಮುಂದಿನ ಜೂನ್ ಒಳಗೆ ಕೋವಿಡ್-19 ನಿವಾರಣೆಗೆ  ಔಷಧಿ  ಸಿದ್ದವಾಗಲಿದೆ ಎಂದು ಅಸ್ತ್ರಾ ಜೆನಿಕಾ  ಔಷಧ  ಕಂಪನಿ ಆಶಾಭಾವನೆ ವ್ಯಕ್ತಪಡಿಸಿದೆ.
 ಮಹಾಮಾರಿ  ಕೊರೋನಾ ಯೂರೋಪ್  ದೇಶಗಳಲ್ಲಿ  ದಿನೇ  ದಿನೇ  ವಿಜೃಂಭಿಸಿದ್ದು, ಇದರ  ನಡುವೆಯೇ  ಪ್ರಮುಖ  ಔಷಧ  ಕಂಪನಿಗಳಲ್ಲಿ ಸೂಕ್ತ  ಮದ್ದು  ಕಂಡು  ಹಿಡಿಯುವ ಸಂಶೋಧನೆ  ಮುಂದುವರಿದಿದೆ. ಔಷಧ ಶಾಸ್ತ್ರದಲ್ಲಿ   ಸಾಕಷ್ಟು  ಹೆಸರು ಮಾಡಿರುವ  ಬ್ರಿಟನ್ ಕಂಪನಿ, ಇನ್ನೊಂದು   ತಿಂಗಳೊಳಗೆ  ಕೊರೋನಾ ನಿವಾರಣೆಯ ಮದ್ದು  ಕಂಡು ಹಿಡಿಯುವುದಾಗಿ  ಹೇಳಿದೆ.  ತಾನು ತಯಾರಿಸಿರುವ  ಔಷಧಿ ಈಗಾಗಲೇ ಪ್ರಯೋಗದಲ್ಲಿದ್ದು, ಸಂಬಂಧಿತ  ವರ್ಗದಿಂದ  ಅನುಮತಿ ದೊರೆತ  ಮೇಲೆ ಇದು  ಮಾರುಕಟ್ಟೆಗೆ  ಬರಲಿದೆ ಎಂದು  ಕಂಪನಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss