ಡೋನಟ್ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಮನೆಯಲ್ಲೇ ಮಾಡಬಹುದಾದ ಫ್ಲೇವರ್ಫುಲ್ ಡೋನಟ್ ತಿನ್ನಲು ಅದ್ಭುತವಾಗಿರುತ್ತದೆ. ಮೈಲ್ಡ್ ಸಿಹಿ ಅಂಶ ಹೊಂದಿರುವ ಈ ಸಿಹಿತಿಂಡಿ ಮಾಡುವುದು ತುಂಬಾನೆ ಸುಲಭ. ಹೇಗೆ ಮಾಡೋದು ಈ ಡೋನಟ್ ನೋಡಿ..
ಬೇಕಾಗುವ ಸಾಮಾಗ್ರಿಗಳು
- ನೀರು
- ಬಟರ್ಮಿಲ್ಕ್
- ಒಂದು ಮೊಟ್ಟೆ
- ಸ್ವಲ್ಪ ಬೆಣ್ಣೆ
- ಮೈದಾ
- ಎರಡು ಸ್ಪೂನ್ ಸಕ್ಕರೆ
- ಒಂದು ಸ್ಪೂನ್ ಉಪ್ಪು
- ಅರ್ಧ ಸ್ಪೂನ್ ಈಸ್ಟ್
- ಎಣ್ಣೆ
- ಸಕ್ಕರೆ ಪುಡಿ
ಮಾಡುವ ವಿಧಾನ - ಬಟರ್ಮಿಲ್ಕ್,ಮೊಟ್ಟೆ,ನೀರು, ಮೆಲ್ಟೆಡ್ ಬಟರ್ ಮೈದಾ ಹಾಕಿ ಮಿಕ್ಸ್ ಮಾಡಿ.
- ನಂತರ ಈಸ್ಟ್ ಹಾಕಿ
- ನಂತರ ಈ ಮಿಶ್ರಣವನ್ನು ಎರಡು ಗಂಟೆ ಬಿಡಿ.
- ನಂತರ ಡೋನಟ್ ಶೇಪ್ನಲ್ಲಿ ಹಿಟ್ಟನ್ನು ಕತ್ತರಿಸಿ
- ಇದನ್ನು ಇಡ್ಲಿ ರೀತಿ ನೀರು ಹಾಕಿಸ್ವಲ್ಪ ಬೇಯಿಸಿ
- ನಂತರ ಅದನ್ನು ಎಣ್ಣೆಯಲ್ಲಿ ಕರಿಯಿರಿ.
- ನಂತರ ಇದಕ್ಕೆ ಶುಗರ್ಕೋಟ್ ಮಾಡಿ. ಇನ್ನು ಬೇಕೆಂದರೆ ಜಾಮ್,ಹೇಝಲ್ನಟ್ ಕ್ರೀಂ,ನಟೆಲಾ,ಚಾಕಲೇಟ್ ಸಾಸ್ ಏನಾದರೂ ಹಾಕಿ ತಿನ್ನಬಹುದು.