Wednesday, August 17, 2022

Latest Posts

ಡ್ರಗ್ಸ್​​ ದಂಧೆಯ ಮೇನ್ ಆ್ಯಕ್ಟರ್ ಎಂಟ್ರಿ ಆಗಬೇಕಿದೆ: ಸಚಿವ ಸಿ.ಟಿ. ರವಿ

ಚಿಕ್ಕಮಗಳೂರು: ಬಹಳ ದಿನಗಳಿಂದ ಡ್ರಗ್ಸ್​ ದಂಧೆಯ ಸೈಡ್ ಆ್ಯಕ್ಟರ್​ಗಳು ಸಿಗುತ್ತಿದ್ದರು. ಈಗ ಮೇನ್ ಆ್ಯಕ್ಟರ್ ಎಂಟ್ರಿ ಆಗ್ತಾರಾ ಅಂತಾ ಕಾದು ನೋಡಬೇಕು ಎಂದು ಸಚಿವ ಸಿ.ಟಿ. ರವಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸಿಕ್ಕಿ ಬಿದ್ದ ಡ್ರಗ್ಸ್ ಜಾಲದ ಕುರಿತು ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಇದು ವ್ಯವಸ್ಥಿತವಾದ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಜಾಲವಾಗಿದೆ ಎಂದಿದ್ದಾರೆ.

ಪ್ರಕರಣದ ಕುರಿತು ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಈ ಜಾಲದಲ್ಲಿ ಯಾರಿದ್ದಾರೆ, ವ್ಯಾಪಾರ ಯಾರದು ಎಂಬುದು ತನಿಖೆಯ ನಂತರ ಹೊರಬರಲಿದೆ. ಇಂದ್ರಜಿತ್ ಲಂಕೇಶ್ ಅವರಿಗೆ ರಕ್ಷಣೆ ಇದ್ದೇ ಇರುತ್ತದೆ. ಅವರು ತನಿಖೆಗೆ ಸಹಕಾರ ನೀಡಬೇಕು. ಅವರಿಗೆ ಯಾರ ಬಗ್ಗೆಯೂ ಭಯ ಬೇಡ. ಅವರಿಗೆ ಸೂಕ್ತ ರಕ್ಷಣೆಯನ್ನು ನೀಡಲಾಗುತ್ತದೆ . ಈ ಜಾಲವನ್ನು ಬಗ್ಗು ಬಡಿಯಲು ಅವರ ಸಹಕಾರ ಅಗತ್ಯವಿದೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!