Thursday, July 7, 2022

Latest Posts

ಡ್ರಗ್ಸ್‌ ಮಾಫಿಯಾ ನಂಟು: ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿದ ರಿಯಾ ಹೇಳಿಕೆ

ಮುಂಬೈ: ಡ್ರಗ್ಸ್‌ ಮಾಫಿಯಾ ಬಾಲಿವುಡ್‌ ಅಂಗಳದಲ್ಲಿ ಸಂಚಲನ ಉಂಟು ಮಾಡ್ತಿದ್ದು, ನಟಿ ರಿಯಾ ಚಕ್ರವರ್ತಿ ಇದೀಗ ಹಲವು ಜನರ ಹೆಸರುಗಳನ್ನು ಬಾಯಿ ಬಿಟ್ಟಿದ್ದಾರೆ.
ಹೌದು, ನನ್ನ ಜೊತೆ ನಟಿಯರಾದ ಸಾರಾ ಅಲಿ ಖಾನ್, ರಾಕುಲ್ ಪ್ರೀತ್ ಸಿಂಗ್ ಕೂಡ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಎನ್‍ಸಿಬಿ ತನಿಖೆ ವೇಳೆ ರಿಯಾ ಚಕ್ರವರ್ತಿ ಒಪ್ಪಿಕೊಂಡಿದ್ದಾಳೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿವೆ.
ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ರಿಯಾ ಎನ್‍ಸಿಬಿ ಅಧಿಕಾರಿಗಳ ವಿಚಾರಣೆ ವೇಳೆ ಹಲವು ನಟಿಯರ ಹೆಸರು ಹೇಳಿದ್ದು, ನಟಿಯರಾದ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್, ಡಿಸೈನರ್ ಸಿಮೋನೆ ಖಂಬಟ್ಟಾ, ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತೆ ಮತ್ತು ಮಾಜಿ ಮ್ಯಾನೇಜರ್ ರೋಹಿಣಿ ಅಯ್ಯರ್ ಮತ್ತು ಚಲನಚಿತ್ರ ನಿರ್ಮಾಪಕ ಮುಖೇಶ್ ಛಭ್ರಾ ಎಲ್ಲರೂ ಡ್ರಗ್ ತೆಗೆದುಕೊಂಡಿದ್ದಾರೆ ಎಂದು ಬಾಯ್ಬಿಟ್ಟಿದ್ದಾಳೆ ಎಂದು ಟೈಮ್ಸ್ ನೌ ವರದಿ ವರದಿ ಮಾಡಿದೆ.
ಈ ಎಲ್ಲ ಸೆಲೆಬ್ರಿಟಿಗಳಿಗೆ ಈಗ ಎನ್‌ಸಿಬಿ ನೋಟಿಸ್‌ ನೀಡುವ ಸಾಧ್ಯತೆ ದಟ್ಟವಾಗಿದೆ. 25ಕ್ಕೂ ಅಧಿಕ ಸೆಲೆಬ್ರಿಟಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಹೇಳಲಾಗುವುದು. ಕಲಾವಿದರು, ನಿರ್ದೇಶಕರು, ಕಾಸ್ಟಿಂಗ್‌ ಡೈರೆಕ್ಟರ್ಸ್‌ ಮತ್ತು ನಿರ್ಮಾಪಕರು ಕೂಡ ಈ ಪಟ್ಟಿಯಲ್ಲಿ ಇದ್ದಾರೆ ಎನ್ನಲಾಗಿದೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss