Thursday, August 18, 2022

Latest Posts

ಡ್ರಗ್ಸ್‌ ಸಾಗಣೆ, ಸೇವನೆ: ಡ್ಯಾನ್ಸರ್ ಕಿಶೋರ್ ಜೊತೆ ಪಾರ್ಟಿ ಮಾಡಿದ್ದ ಯುವತಿಯ ಬಂಧನ

ಮಂಗಳೂರು: ಡ್ರಗ್ಸ್‌ ಸಾಗಣೆ ಹಾಗೂ ಸೇವನೆ ಆರೋಪ ಸಂಬಂಧಿಸಿ ಡ್ಯಾನ್ಸರ್, ನೃತ್ಯ ಸಂಯೋಜಕ ಕಿಶೋರ್ ಅಮಾನ್ ಶೆಟ್ಟಿ (30) ವಿಚಾರಣೆ ಮುಂದುವರಿದಿದ್ದು, ಆತನೊಂದಿಗೆ ಡ್ರಗ್ಸ್ ಪಾರ್ಟಿ ಮಾಡಿದ್ದ ಯುವತಿಯನ್ನು ಕೂಡ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ ಬಂಧಿತ ಯುವತಿಯನ್ನು ಮಣಿಪುರಿ ಮೂಲದ ಆಸ್ಕಾ ಎಂದು ಗುರುತಿಸಲಾಗಿದೆ. ಈಕೆ ಮಂಗಳೂರಿನ ಸ್ಪಾ ಒಂದರಲ್ಲಿ ಕೆಲಸ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!