Monday, August 8, 2022

Latest Posts

‘ಡ್ರಗ್ಸ್’ ತನಿಖಾಧಿಕಾರಿಗಳಿಗೆ ಇಂದ್ರಜೀತ್‌ ಪ್ರಶ್ನೆ: ಇನ್ನು ಯಾಕೆ ಆ ನಿರ್ದೇಶಕನ ಮಗನನ್ನ ಯಾಕೆ ಬಂಧಿಸಿಲ್ಲ?

ಬೆಂಗಳೂರು: ಸ್ಯಾಂಡಲ್‌ವುಡ್‌ ಡ್ರಗ್ಸ್ ದಂಧೆ ಪ್ರಕರಣವು ದಿನೇ ದಿನೇ ವಿವಿಧ ಆಯಾಮವನ್ನು ಪಡೆಯುತ್ತಿದ್ದು, ಇದಕ್ಕೆ ಸಂಬಂಧಿಸಿ ನಿರ್ದೇಶಕ ಇಂದ್ರಜೀತ್‌ ಲಂಕೇಶ್‌ ಮತ್ತೊಂದು ಹೊಸ ಬಾಂಬ್‌ ಸಿಡಿಸಿದ್ದಾರೆ.
ಪ್ರಕರಣ ಕುರಿತು ತನಿಖೆ ನಡೆಯುತ್ತಿದ್ದು, ಇಷ್ಟು ದಿನವಾದರೂ ಆ ನಿರ್ದೇಶಕನ ಮಗನನ್ನ ಯಾಕೆ ಬಂಧಿಸಿಲ್ಲ ಎಂದು ಇಂದ್ರಜೀತ್‌ ಲಂಕೇಶ್‌ ಪ್ರಶ್ನಿಸಿದ್ದಾರೆ.
ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ಸಿಸಿಬಿ ಅಧಿಕಾರಿಗಳ ಮೇಲೆ ನನಗೆ ತುಂಬಾನೇ ನಂಬಿಕೆ ಇತ್ತು. ಆದರೆ, ಅವರು ಮಾಡುತ್ತಿರುವವುದನ್ನ ನೋಡಿದರೆ, ಕೇವಲ ನಾಮಕವಸ್ತೆಗೆ ವಿಚಾರಣೆ ನಡೆಸುತ್ತಿದ್ದಾರೆ ಅನ್ನಿಸುತ್ತಿದೆ. ನಾನು ಅಧಿಕಾರಿಗಳಿಗೆ ತುಂಬಾ ಮಾಹಿತಿ ನೀಡಿದ್ದೇನೆ .ದಂಧೆಯಲ್ಲಿ ಖ್ಯಾತ ನಿರ್ದೇಶಕನ ಮಗ ಮತ್ತು ಸರ್ಕಾರಿ ಅಧಿಕಾರಿಯ ಮಗ ಕೂಡ ಇದ್ದಾರೆ. ಆದರೆ ಅವರನ್ನು ಇದುವರೆಗೂ ಬಂಧಿಸಿಲ್ಲ ಎಂದಿದ್ದಾರೆ.
ಈ ಕೇಸಿಗೆ ಲವ್‌ ಜಿಹಾದ್‌ ಅನ್ನೋ ಹೆಸರಿನಿಂದ ಬಣ್ಣ ಬಳಿಯುವ ಪ್ರಯತ್ನ ನಡೆಯುತ್ತಿದೆ. ಆದರೆ ಇದಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ರಾಗಿಣಿಯ ಕೇಸು ಮುಚ್ಚಿಹಾಕಲು ಪ್ರಯಶ್ನಿಸುತ್ತಿರುವ ಆ ಪ್ರಭಾವಿ ರಾಜಕಾರಣಿಯನ್ನೂ ಕೂಡ ಬಂಧಿಸಬೇಕು ಎಂದು ನಿರ್ದೇಶಕ ಇಂದ್ರಜೀತ್‌ ಲಂಕೇಶ್‌ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss