Thursday, August 18, 2022

Latest Posts

ಡ್ರಗ್ಸ್ ದಂಧೆಗೆ ಕಡಿವಾಣಕ್ಕೆ ಕಠಿಣ ಕಾನೂನು ರೂಪಿಸಲು ಆಗ್ರಹಿಸಿ ಎಬಿವಿಪಿಯಿಂದ ಪತ್ರ ಚಳುವಳಿ

ಮೈಸೂರು: ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಕಠಿಣ ಕಾನೂನು ರೂಪಿಸಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ ಮೈಸೂರು ಘಟಕದಿಂದ ಶನಿವಾರ ನಗರದಲ್ಲಿ ಅಂಚೆ ಪತ್ರ ಚಳವಳಿಯನ್ನು ನಡೆಸಲಾಯಿತು.
ನಗರದ ಮುಖ್ಯ ಅಂಚೆ ಕಛೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಕೆಲಕಾಲ ನಾನಾ ಘೋಷಣೆಗಳನ್ನು ಕೂಗಿದರು. ಬಳಿಕ ಸರ್ಕಾರಕ್ಕೆ ಬರೆದಿದ್ದ ಅಂಚೆ ಪತ್ರಗಳನ್ನು ಅಲ್ಲಿದ್ದ ಡಬ್ಬಿಗೆ ಹಾಕಿ, ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿರುವವರನ್ನು ತಕ್ಷಣವೇ ಬಂಧಿಸಿ ಅವರ ಮೇಲೆ ರಾಷ್ಟçದ್ರೋಹದ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಮಾದಕ ವಸ್ತುಗಳ ಬಳಕೆ ಇಂದು ಸಮಾಜದ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿದೆ. ಈ ಜಾಲಕ್ಕೆ ಶಾಲಾ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ಮುಗ್ಧ ವಿದ್ಯಾರ್ಥಿಗಳು ಬಲಿಯಾಗುತ್ತಿರುವುದು ಭವಿಷ್ಯದ ದೃಷ್ಟಿಯಿಂದ ಅಪಾಯಕಾರಿ ವಿದ್ಯಮಾನವಾಗಿದೆ. ಡ್ರಗ್ಸ್ ದಂಧೆಯಲ್ಲಿ ಬಹುಪ್ರಭಾವಿಗಳು ಭಾಗಿಯಾಗಿರುವುದರಿಂದ ಅಂಥಹವರನ್ನು ಮಟ್ಟ ಹಾಕುವ ಸವಾಲು ರಾಜ್ಯ ಸರ್ಕಾರದ ಮುಂದಿದೆ. ಇದಕ್ಕಾಗಿ ಪ್ರಬಲವಾದ ಕಾನೂನನ್ನು ರೂಪಿಸುವುದೊಂದೇ ಪರಿಹಾರವಾಗಿದ್ದು, ಸರ್ಕಾರ ನಿಷ್ಪಕ್ಷಪಾತವಾದ ಕಾನೂನು ಕ್ರಮದ ಮೂಲಕ ಡ್ರಗ್ಸ್ ದಂಧೆಯ ವಿರುದ್ಧ ಸಮರ ಸಾರಬೇಕು ಎಂದು ಒತ್ತಾಯಿಸಿದರು. ಪತ್ರ ಚಳವಳಿಯಲ್ಲಿ ಪರಿಷತ್‌ನ ರಾಜ್ಯ ಸಹಕಾರ್ಯದರ್ಶಿ ಶ್ರೀರಾಮ, ನಗರ ಸಂಘಟನಾಕಾರ್ಯದರ್ಶಿ ಶರತ್, ನಗರ ಸಹಕಾರ್ಯದರ್ಶಿಗಳಾದ ಪ್ರಜ್ಞಾ, ಚಿರಂತ್, ಕಾರ್ಯಕರ್ತರುಗಳಾದ ನಾಗಶ್ರೀ, ರಚನಾ, ಸುಹಾಸ್, ಆದರ್ಶ್, ನಗರ ಸಹ ಕಾರ್ಯದರ್ಶಿ ಮಲ್ಲಪ್ಪ ಎಸ್.ಪಿ ಮತ್ತಿತರರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!