Thursday, June 30, 2022

Latest Posts

ಡ್ರಗ್ಸ್ ದಂಧೆಯಲ್ಲಿ ಯಾರೇ ಭಾಗವಹಿಸಿದ್ದರೂ ತಪ್ಪೇ: ರಘು ಆಚಾರ್

ಮೈಸೂರು: ಡ್ರಗ್ಸ್ ದಂಧೆಯಲ್ಲಿ ಶಾಸಕ ಜಮೀರ್ ಅಹಮ್ಮದ್ ಮಾತ್ರವಲ್ಲ ಯಾರೇ ಭಾಗವಹಿಸಿದ್ದರೂ ತಪ್ಪೇ ಎಂದು ವಿಧಾನಪರಿಷತ್ ಸದಸ್ಯ ರಘು ಆಚಾರ್ ಹೇಳಿದರು.
ಶನಿವಾರ ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಡ್ರಗ್ಸ್ ದಂಧೆಯಲ್ಲಿ ಶಾಸಕ ಜಮೀರ್ ಅಹಮದ್ ಮೇಲಿನ ಆರೋಪ ಸಾಬೀತಾಗಿಲ್ಲ. ಕೇವಲ ಆರೋಪ ಮಾಡಲಾಗುತ್ತಿದೆ. ಎಲ್ಲಾ ಸರಕಾರದ ಅವಧಿಯಲ್ಲೂ ಈ ದಂಧೆ ಇತ್ತು ಎಂದು ತಿಳಿಸಿದರು.
ಡ್ತಗ್ಸ್ ದಂಧೆಯ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಗೃಹ ಸಚಿವರು ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ಮಾಡುತ್ತಿದ್ದಾರೆ. ನನಗೆ ತಿಳಿದ ಮಟ್ಟಿಗೆ ಯಾವ ರಾಜಕಾರಣಿಗಳು ಡ್ರಗ್ಸ್ ತೆಗೆದುಕೊಂಡಿದ್ದನ್ನು ನೋಡಿಲ್ಲ. ೩೨ ರಾಜಕಾರಣಿಗಳು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಅಂತಹ ರಾಜಕಾರಣಗಳ ಹೆಸರನ್ನು ಮಾಧ್ಯಮಗಳ ಮುಂದೆ ಬಹಿರಂಗ ಮಾಡಬೇಕಿತ್ತು ಎಂದರು.
ಯಾರೊಬ್ಬರೋ ಡ್ರಗ್ಸ್ ತೆಗೆದುಕೊಂಡರೇ ಇಡೀ ವಿದ್ಯಾಸಂಸ್ಥೆಗಳ ಮೇಲೆ ಆಪಾದನೆ ಹೊರಿಸುವುದು ತಪ್ಪು. ಒಂದು ವಿದ್ಯಾಸಂಸ್ಥೆ ಕಟ್ಟ ಬೇಕಾದರೇ ಸಾವಿರಾರು ಜನರ ಶ್ರಮವಿದೆ. ಕೇವಲ ಒಬ್ಬ, ಇಬ್ಬರು ವಿದ್ಯಾರ್ಥಿ ಡ್ರಗ್ ತೆಗೆದುಕೊಂಡರೆ, ಇಡೀ ವಿದ್ಯಾಸಂಸ್ಥೆಯ ಬಗ್ಗೆಯೇ ಅಪಪ್ರಚಾರ ಮಾಡುವುದು ಖಂಡಿತ ತಪ್ಪು. ನಿಮ್ಮ ಬಳಿ ದಾಖಲೆ ಇದ್ದರೆ ಸಿಸಿಬಿ ಪೊಲೀಸರಿಗೆ ಕೊಡಿ. ಅವರು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಲಿ ಎಂದು ನುಡಿದರು.
ಸದ್ಯ ಕೊರೋನಾ ಸೋಂಕು ದೇಶಾದ್ಯಂತ ವ್ಯಾಪಿಸುತ್ತಿದೆ. ರಾಜ್ಯದಲ್ಲೂ ಸೋಂಕು ಮಿತಿ ಮೀರುತ್ತಿದೆ. ಆದರೆ ರಾಜ್ಯ ಸರಕಾರ ಈ ಹಂತದಲ್ಲೂ ಲಾಕ್ ಡೌನ್ ಸಡಿಲಗೊಳಿಸಿ, ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಇದರಿಂದ ಜನ ಸಾಮಾನ್ಯರು ಕಂಗಾಲಾಗಿದ್ದಾರೆ. ರಾಜ್ಯ ಸರಕಾರ, ಕೇಂದ್ರ ಸರಕಾರದ ಮಾರ್ಗಸೂಚಿಗಳನ್ನು ಅನುಸರಿಸುವ ಬದಲು ಸ್ವಯಂ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss