Thursday, July 7, 2022

Latest Posts

ಡ್ರಗ್ಸ್ ಧಂಧೆಯಲ್ಲಿ ಶಾಸಕರು, ಸಚಿವರು ಯಾರೇ ಭಾಗವಹಿಸಿದ್ದರೂ ಬಂಧಿಸಿ: ವಾಟಾಳ್ ನಾಗರಾಜ್ ಆಗ್ರಹ

ಮೈಸೂರು: ಡ್ರಗ್ಸ್ ದಂಧೆಯಲ್ಲಿ ಶಾಸಕ, ಸಚಿವರು ಸೇರಿದಂತೆ ಯಾರೇ ಭಾಗವಹಿಸಿದ್ದರೂ, ಅವರನ್ನು ಕೂಡಲೇ ಪೊಲೀಸರು ಯಾವುದೇ ಮುಲಾಜಿಲ್ಲದೆ ಬಂಧಿಸಬೇಕು ಎಂದು ಕನ್ನಡ ಚಳುವಳಿ ವಾಟಾಳ್ ನಾಗರಾಜ್ ಪಕ್ಷದ ಅಧ್ಯಕ್ಷರಾದ ಮಾಜಿ ಶಾಸಕ ವಾಟಾಳ್‌ನಾಗರಾಜ್ ಆಗ್ರಹಿಸಿದರು.
ನಗರದ ಜಯಚಾಮರಾಜ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಸ್ಯಾಂಡಲ್‌ವುಡ್ ನಟನಟಿಯರ ಮೇಲೆ ಡ್ರಗ್ಸ್ ಆರೋಪ ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರು ಹೆಣ್ಣು ಮಕ್ಕಳಿಗೆ ಮಾತ್ರ ಜೈಲು, ಆಸ್ಪತ್ರೆ ಅಂತ ಓಡಾಡುಸುತ್ತಿದ್ದಾರೆ. ಈ ಪ್ರಕರಣದಲ್ಲಿ ರಾಜಕಾರಣಿಗಳ ಮಕ್ಕಳು ಇಲ್ವ? ಗೃಹ ಸಚಿವ ಬೊಮ್ಮಾಯಿ, ಸಿಎಂ ಯಡಿಯೂರಪ್ಪ ಸತ್ಯ ಒಪ್ಪಿಕೊಳ್ಳಿ ಎಂದು ಪ್ರಶ್ನಿಸಿದ್ದಾರೆ. ಪೊಲೀಸರು ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಆದರೆ, ನಿಮಗೆ ಯಾರ ಒತ್ತಡ ಇದೆ ಹೇಳಿ. ಎಲ್ಲರ ಹೆಸರು ಬಹಿರಂಗವಾಗಬೇಕು’ ಇದು ನನ್ನ ಒತ್ತಾಯ. ಈ ಪ್ರಕರಣದಲ್ಲು ಶಾಸಕ ಜಮೀರ್ ಅಹಮದ್ ಇದ್ದರೂ ಅವರನ್ನು ಬಂಧಿಸಬೇಕು. ದಂಧೆಯಲ್ಲಿ ಶಾಸಕರು ಇರಲಿ’ ಸಚಿವರೇ ಇರಲಿ ಎಲ್ಲರನ್ನ ಈ ಪ್ರಕರಣದಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಈ ಪ್ರಕರಣದಲ್ಲಿ ಮಂತ್ರಿಗಳು, ಎಂಎಲ್‌ಎಗಳು ಯಾರು ಇಲ್ವಾ? ಗುಟ್ಕ ತಿಂದವರು ಪೊಲೀಸರು, ಅಧಿಕಾರಿಗಳು ಯಾರು ಇಲ್ವ? ಸರಿಯಾದ ತನಿಖೆ ಮಾಡದೆ’ ದಿಕ್ಕು ತಪ್ಪಿಸಿದರೆ ಮುಂದಿನ ಮಂಗಳವಾರ ನಾನೇ ಸಿಸಿಬಿ ಕಚೇರಿ ಮುಂದೆ ಸತ್ಯಾಗ್ರಹ ಮಾಡುತ್ತಿನಿ ಎಂದು ಎಚ್ಚರಿಕೆ ನೀಡಿದರು.
ಈ ಬಾರಿ ಸರ್ಕಾರ ಸರಳವಾಗಿ ನಡೆಸಲು ಉದ್ದೇಶಿಸಿರುವ ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾವು ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಬಾರದು. ಬನ್ನಿಮಂಟಪದವರೆಗೂ ಜಂಬೂಸವಾರಿ ಮೆರವಣಿಗೆ ಸಾಗಬೇಕು. ಹೀಗಾಗದಿದ್ದರೆ, ನಾನೇ ಜಟಕಾ ಗಾಡಿಯಲ್ಲಿ ಚಾಮುಂಡೇಶ್ವರಿ ಕೂರಿಸಿ, ಮೆರವಣಿ ಮಾಡುತ್ತೇನೆ ಎಂದು ಕಿಡಿಕಾರಿದರು
ದಸರಾ ನಾಡಹಬ್ಬ,ಅದ್ದೂರಿಯಾಗಿಯೇ ಮಾಡಿ. ಕೋರೋನಾ ಸಂದರ್ಭದಲ್ಲಿ ಬಹಳ ವ್ಯವಸ್ಥಿತವಾಗಿ ಸರ್ಕಾರ ಮಾಡಬಹುದು. ಆದರೆ, ಸರ್ಕಾರಕ್ಕೆ ಇದು ಇಷ್ಟವಿಲ್ಲ. ಒಂದು ಕಡೆ ಸರಳ ದಸರಾ ಆದರೆ, ಅದಕ್ಕೆ ೧೫ ಕೋಟಿ ಏಕೆ ಬೇಕಿತ್ತು. ಇಷ್ಟು ಹಣ ಖರ್ಚು ಮಾಡಿ ದಸರಾ ಮಾಡುತ್ತಿದ್ದಾರೆ .ಇದರ ಉದ್ದೇಶವೇ ಬೇರೆ ಇದೆ. ಸ್ಥಳಿಯಾ ಕಲಾವಿದರಿಗೆ ಅವಕಾಶ ನೀಡಬೇಕು. ಅಂತರಾಷ್ಟಿçÃಯ ಕಲಾವಿದರು ಏಕೇ ಬೇಕು ಎಂದು ಪ್ರಶ್ನಿಸಿದರು.
ಕೊರೋನಾ ಬಗ್ಗೆ ಏನ್ ಮಾಡಿದ್ದೀರಾ ಶ್ವೇತ ಪತ್ರ ಹೊರಡಿಸಿ;
ಕೊರೋನಾ ನಿಯಂತ್ರಣದ ಬಗ್ಗೆ ಸರ್ಕಾರ ಸರಿಯಾದ ಕ್ರಮ ವಹಿಸಿಲ್ಲ. ಕೊರೋನಾ ನಿಯಂತ್ರಣಕ್ಕೆ ಏನ್ ಮಾಡಿದ್ದೀರಾ ಎಂದು ಶ್ವೇತ ಪತ್ರ ಹೊರಡಿಸಿ.ಕರ್ನಾಟಕ ಸಾವಿನ ಮನೆ’ಯಾಗಿದೆ. ವಿಕ್ಟೋರಿಯಾ ಆಸ್ಪತ್ರೆ ಯಮನ ಅರಮನೆಯಂತಿದೆ. ಸರಿಯಾದ ಬೆಡ್ ವ್ಯವಸ್ಥೆ ಇಲ್ಲ. ವೆಂಟಿಲೇಟರ್ ಇಲ.ಕೊರೊನಾ ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಸಿಎಂ ಹಾಗೂ ಆರೋಗ್ಯ ಮಂತ್ರಿ ಈ ಬಗ್ಗೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ೭೧೦೦ ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ ಅಂತೀರಾ. ಹಾಗಾದರೆ ಕೊರೋನಾಗೆ ಬಲಿಯಾದವರಿಗೆ ೫ಲಕ್ಷ ಪರಿಹಾರ ಹಣ ಕೊಡಬೇಕು ಎಂದು ಆಗ್ರಹಿಸಿದರು.
ಹಿಂದಿ ಹೇರಿಕೆ ಮಾಡಿದರೆ ಕ್ರಾಂತಿ ಆಗುತ್ತೆ:
ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡಲು ಹೊರಟಿರುವ ವಿರುದ್ಧ ಆಕ್ರೋಶವ್ಯಕ್ತಪಡಿಸಿದ ವಾಟಾಳ್ ನಾಗರಾಜ್, ಹಿಂದಿ ಹೇರಿಕೆ ಮಾಡಿದರೆ ದೊಡ್ಡ ಕ್ರಾಂತಿ ಆಗಲಿದೆ. ಮೈಸೂರಿನಿಂದಲೇ ಈ ಕ್ರಾಂತಿ ಆರಂಭವಾಗಲಿದೆ. ಕೇಂದ್ರ ಸರ್ಕಾರ ಒತ್ತಾಯವಾಗಿ ಹಿಂದಿ ಹೇರಿಕೆ ಮಾಡುತ್ತಿದೆ. ಇದು ಸರಿಯಾದ ಕ್ರಮವಲ್ಲ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss