spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಡ್ರಗ್ಸ್ ಪ್ರಕರಣದಲ್ಲಿ ನಟ-ನಟಿಯರಷ್ಟೇ ಅಲ್ಲದೆ ರಾಜಕಾರಣಿಗಳೂ ಶಾಮೀಲಾಗಿದ್ದಾರೆ: ಮುತಾಲಿಕ್

- Advertisement -Nitte

ಮಂಡ್ಯ: ಡ್ರಗ್ಸ್ ಪ್ರಕರಣದಲ್ಲಿ ಕೇವಲ ನಟ-ನಟಿಯರಷ್ಟೇ ಅಲ್ಲದೆ, ರಾಜ್ಯದ 32ಕ್ಕೂ ಹೆಚ್ಚು ರಾಜಕಾರಣಿಗಳು ಶಾಮೀಲಾಗಿದ್ದಾರೆ ಎಂದು ಶ್ರೀಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತಿಳಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ನಟ-ನಟಿಯರನ್ನಷ್ಟೇ ಗುರಿ ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ. ಆದರೆ, ಇದರಲ್ಲಿ ರಾಜಕಾರಣಿಗಳು ಇದ್ದು, ವಾರದೊಳಗೆ ಗೃಹ ಸಚಿವರನ್ನು ಭೇಟಿ ಮಾಡಿ ಆಧಾರ ಸಮೇತವಾಗಿ 32 ಮಂದಿ ರಾಜಕಾರಣಿಗಳ ಪಟ್ಟಿಯನ್ನು ಸಲ್ಲಿಸುವುದಾಗಿ ಸ್ಪಷ್ಟಪಡಿಸಿದರು.
ರಾಜಕಾರಣಿಗಳು ಚುನಾವಣಾ ಸಮಯದಲ್ಲಿ ಮಾತ್ರ ನಟ-ನಟಿಯರನ್ನು ಕರೆಸಿ ಪ್ರಚಾರ ನಡೆಸುತ್ತಾರೆ. ಅವರನ್ನು ಯಾಕೆ ಚುನಾವಣೆಗೆ ಬಳಸಿಕೊಳ್ಳಬೇಕು ಎಂದು ಪ್ರಶ್ನಿಸಿದರು.
ಪೊಲೀಸರ ಮೇಲೆ ರಾಜಕಾರಣಿಗಳ ಒತ್ತಡ :
ರಾಜಕಾರಣಿಗಳ ಮಾಲೀಕತ್ವದಲ್ಲಿ ಕ್ಲಬ್, ಪಬ್, ಬಾರ್‍ಗಳು ಇವೆ. ಸಾವಿರಾರು ಕೋಟಿ ರೂ.ಗಳ ಡ್ರಗ್ಸ್ ವ್ಯವಹಾರ ನಡೆಸುತ್ತಿದ್ದಾರೆ. ವೈನ್ಸ್ ಹಾಗೂ ಡ್ರಗ್ಸ್ ಲಾಭಿ ರಾಜಕೀಯವನ್ನು ಹಿಡಿದಿಟ್ಟುಕೊಂಡಿದ್ದು, ಈ ಹಿನ್ನಲೆಯಲ್ಲಿ ಪೆÇಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದರು.
ಡ್ರಗ್ಸ್ ದಂಧೆಯಲ್ಲಿ ಶಾಸಕ ಜಮೀರ್ ಅಹಮದ್ ಸಹ ಶಾಮೀಲಾಗಿದ್ದು, ಅವರನ್ನು ಕೂಡಲೇ ಬಂಧಿಸಬೇಕು. ರಾಜಕಾರಣದಲ್ಲಿ ವ್ಯವಹಾರ ಇಟ್ಟುಕೊಂಡಿರುವುದರಿಂದ ಜಮೀರ್ ಅವರನ್ನು ಬಂಧಿಸುವಲ್ಲಿ ಪೆÇಲೀಸರು ಮತ್ತು ಸರ್ಕಾರ ಮೀನಾ ಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ನಟಿ ಸಂಜನಾ ಗಂಡ ಡಾ.ಅಜೀಜ್ ಕೂಡ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾನೆ. ಲವ್ ಜಿಹಾದ್ ಮತ್ತು ಡ್ರಗ್ಸ್ ಎರಡಕ್ಕೂ ನೇರ ಸಂಬಂಧವಿದೆ. ಇದಕ್ಕೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಇದಕ್ಕೆ ಮೂಲ ಪುರುಷ. ಅಜೀಮ್ ಅಸ್ತಾನ ಎಂಬ ದೇಶದ್ರೋಹಿ ಸೇರಿದಂತೆ ಇವರೆಲ್ಲರೂ ಇಡೀ ಚಿತ್ರರಂಗವನ್ನು ಆವರಿಸಿಕೊಂಡಿದ್ದಾರೆ ಎಂದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss