ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಬಾಲಿವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿಯಾಗಿದ್ದ ಹಾಸ್ಯ ನಟಿ ಭಾರತೀ ಸಿಂಗ್ ಮತ್ತು ಅವರ ಪತಿ ಹರ್ಷ್ ಗೆ ಜಾಮೀನು ನೀಡುವ ವಿಚಾರದಲ್ಲಿ ಸಹಾಯ ಮಾಡಿದ ಇಬ್ಬರು ಅಧಿಕಾರಿಗಳನ್ನು ಎನ್ ಸಿ ಬಿ ಅಮಾನತು ಮಾಡಿ ಆದೇಶ ಹೊರಡಿಸಿದೆ.
ಡ್ರಗ್ಸ್ ಜಾಲದ ಹಿಂದೆ ಬಿದ್ದಿರುವ ಎನ್ ಸಿ ಬಿ ಇತ್ತೀಚೆಗೆ ಹಾಸ್ಯ ನಟಿ ಭಾರತೀ ಸಿಂಗ್ ಮತ್ತು ಅವರ ಪತಿ ಹರ್ಷ್ ಅವರನ್ನು ಬಂಧಿಸಿದ್ದರು, ಈ ವೇಳೆ ಅಧಿಕಾರಿಗಳು ಭಾರತೀ ಮನೆಯಿಂದ 86.5 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದರು.