Sunday, August 14, 2022

Latest Posts

ಡ್ರಗ್ಸ್ ಮುಕ್ತ ಕ್ಯಾಂಪಸ್ ಘೋಷಿಸಿ: ಎಬಿವಿಪಿ ಒತ್ತಾಯ

ಶಿವಮೊಗ್ಗ; ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳು ತಮ್ಮ ಕ್ಯಾಂಪಸ್ ನ್ನು ಡ್ರಗ್ಸ್ ಮುಕ್ತ ಎಂದು ಘೋಷಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ರಾಜ್ಯದಲ್ಲಿ ಡ್ರಗ್ಸ್ ಜಾಲ ವಿಸ್ತಾರವಾಗುತ್ತಾ ಹೋಗುತ್ತಿದೆ. ಕೆಲವರು ಸಿನೆಮಾ ನಟ ನಟಿಯರನ್ನೇ ಆದರ್ಶ ಎಂದುಕೊಂಡಿದ್ದರು. ಈಗ ಅವರೇ ಜಾಲದಲ್ಲಿ ಸಿಕ್ಕಿಬಿದ್ದಿದ್ದಾರೆ. ಡ್ರಗ್ಸ್ ಉಗ್ರವಾದದ ಮತ್ತೊಂದು ಮುಖ ಎಂದರು.
ಡ್ರಗ್ಸ್ ಈಗ ಕಾಲೇಜು ಕ್ಯಾಂಪಸ್ ಗಳನ್ನೂ ಆವರಿಸಿದೆ. ಇದರ ನಿಯಂತ್ರಣಕ್ಕೆ ಕಠಿಣ ಕಾನೂನು ರೂಪಿಸಬೇಕು. ಎಲ್ಲಾ ಶಿಕ್ಷಣ ಸಂಸ್ಥೆಗಳು ಡ್ರಗ್ಸ್ ಮುಕ್ತ ಎಂದು ಘೋಷಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎಬಿವಿಪಿ ಮಹಾನಗರ ಕಾರ್ಯದರ್ಶಿ ಪ್ರೇಮ್ ಸಾಗರ್, ಪ್ರಜ್ವಲ್, ವಿವೇಕ್, ರಘುವೀರ್, ಲಿಂಗರಾಜು ಇನ್ನಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss