ಧಾರವಾಡ: ಭಾರತ ಹಾಗೂ ಕರ್ನಾಟಕ ರಾಜ್ಯಕ್ಕೆ ಡ್ರಗ್ಸ್ ಬರುವುದು ಎಲ್ಲಿಂದ? ಇದರ ಹಿಂದೆ ಯಾರ್ಯಾರ? ಕೈವಾಡ ಹಾಗೂ ಶಾಮಿಲಾಗಿದ್ದಾರೆ. ಇದರ ಮೂಲವನ್ನು ಪತ್ತೆ ಮಾಡುವ ಕಾರ್ಯವನ್ನು ಚುರುಕುಗೊಳಿಸಿದೆ ಎಂದು ಐಎಸ್ಡಿ ಮುಖ್ಯಸ್ಥರ ಭಾಸ್ಕರ್ ರಾವ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ಪ್ರಕರಣ ಕುರಿತಂತೆ ಈಗ ಹೊರ ಬಂದಿರೋದು ‘ಟಿಪ್ ಆಫ್ ದಿ ಐಸ್ ಬರ್ಗ್’ ಅಷ್ಟೇ ಡ್ರಗ್ಸ್. ಪ್ರಕರಣ ವಿಚಾರಣೆಯಲ್ಲಿ ಪೆಡ್ಲರ್ ಮತ್ತು ಕಂಜ್ಯುಮರ್ವರೆಗೆ ಹೋಗಿರುವುದಾಗಿ ಅವರು ತಿಳಿಸಿದರು.
ಕರ್ನಾಟಕಕ್ಕೆ ಕೆಮಿಕಲ್ ಮತ್ತು ಆರ್ಟಿಪಿಷಿಯನ್ ಡ್ರಗ್ ಹೊರ ದೇಶದಿಂದ ಬರುತ್ತಿದೆ. ಸಮುದ್ರ ಮತ್ತು ವಿಮಾನದ ಮೂಲಕ ಬರಲಿದೆಯೇ ಎಂಬುದು ನೋಡಿಕೊಂಡು, ಅಂತಹ ಸ್ಥಳದಲ್ಲಿ ಬೀಗಿ ಕ್ರಮ ಕೈಗೊಳ್ಳುವ ಮೂಲಕ ಕಟ್ಟೆಚ್ಚರ ವಹಿಸುವುದಾಗಿ ಹೇಳಿದರು.
ಡ್ರಗ್ಸ್ ಪ್ರಕರಣದಲ್ಲಿ ಜವಾಬ್ದಾರಿ ಸ್ಥಾನದಲ್ಲಿ ಇರೋರು ಶಾಮೀಲಾಗಿದ್ದಾರಾ? ಅವರ ಪಾತ್ರ ಇದರಲ್ಲಿ ಏನಿದೆ ಎಂಬುದರ ಬಗ್ಗೆ ಶೋಧಿಸುವ ಕಾರ್ಯವನ್ನು ಚುರುಕುಗೊಳಿಸಿದೆ. ಪ್ರಕರಣಕ್ಕೆ ಶೀಘ್ರವೇ ತಾರ್ಕಿಕ ಅಂತ್ಯ ಹಾಡುವುದಾಗಿ ಅವರು ತಿಳಿಸಿದರು.