Monday, August 15, 2022

Latest Posts

ಡ್ರಗ್ಸ್ ಸೇವನೆ, ಮಾರಾಟ ಸಹಿತ ದುಶ್ಚಟಗಳ ಬಗ್ಗೆ ಮಾಹಿತಿ ಇದೆಯಾ? ಇದ್ದರೆ ಈ ನಂಬರ್ ಗೆ ದೂರು ನೀಡಿ

 ಹೊಸ ದಿಗಂತ ವರದಿ, ಮಂಗಳೂರು:

ಡ್ರಗ್ಸ್ ಸೇವನೆ ಮತ್ತು ಮಾರಾಟ ಪ್ರಕರಣಗಳ ಆರೋಪಿಗಳು ವ್ಯಸನ ಮುಂದುವರಿಸಿದರೆ ಕಾನೂನಿನ ಪ್ರಕಾರ ಏನೆಲ್ಲ ಮಾಡಲು ಸಾಧ್ಯವೋ ಅಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಡ್ರಗ್ಸ್ ಸೇವನೆ, ಮಾರಾಟ ಸಹಿತ ದುಶ್ಚಟಗಳ ಬಗ್ಗೆ ಮಾಹಿತಿ ಇದ್ದಲ್ಲಿ ದೂ.112 ಗೆ ದೂರು ನೀಡಿದರೆ ಕ್ರಮ ವಹಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಎಂ. ಶಶಿ ಕುಮಾರ್ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಬುಧವಾರ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಕಳೆದ ಮೂರು ವರ್ಷಗಳಲ್ಲಿ ಮಾದಕ ದ್ರವ್ಯ ಸಾಗಾಟ ಮತ್ತು ವ್ಯಸನ ಪ್ರಕರಣಗಳಲ್ಲಿ ಶಾಮೀಲಾದ ಆರೋಪಿಗಳ ಪರೇಡ್ ನಡೆಸಿ ಮಾತನಾಡಿದರು.
3 ವರ್ಷಗಳಲ್ಲಿ 150ಕ್ಕೂ ಅಧಿಕ ಮಂದಿ ಮಾರಾಟಗಾರರು, 350ಕ್ಕೂ ಅಧಿಕ ಮಂದಿ ಡ್ರಗ್ಸ್ ಸೇವಿಸುವವರ ವಿರುದ್ಧ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರಕರಣಗಳು ದಾಖಲಾಗಿವೆ. ಕಳೆದ ಎರಡು ದಿನಗಳಿಂದ ಹಳೆ ಆರೋಪಿಗಳ ಮನೆಗಳಿಗೆ ಪೊಲೀಸರು ತೆರಳಿ ಅವರನ್ನು ಪೆರೇಡ್‌ಗೆ ಕರೆಸಿಕೊಂಡು ವಿಚಾರಣೆ ನಡೆಸಿ ಅವರಿಂದ ಮಾಹಿತಿಯನ್ನು ಕಲೆ ಹಾಕಲಾಗಿದೆ.
ಬುಧವಾರ 140ಕ್ಕೂ ಅಧಿಕ ಮಂದಿ ಪರೇಡ್‌ನಲ್ಲಿ ಭಾವಹಿಸಿದ್ದು, ಅವರಲ್ಲಿ ಕೆಲವರ ಮೇಲೆ 15ಕ್ಕೂ ಅಧಿಕ ಪ್ರಕರಣಗಳಿವೆ. ರೌಡಿ ಶೀಟರ್‌ಗಳಾಗಿದ್ದು, ಮನ ಪರಿವರ್ತನೆ ಮಾಡಿಕೊಂಡು ಸಮಾಜದಲ್ಲಿ ಉತ್ತಮರಾಗಿ ಬದುಕುತ್ತಿರುವವರ ಮೇಲಿನ ಪ್ರಕರಣವನ್ನು ಹಿಂಪಡೆಯಲು ಕೂಡಾ ಕ್ರಮ ವಹಿಸಲಾಗುವುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss