Sunday, July 3, 2022

Latest Posts

‘ಡ್ರಾಗನ್’ ವಿರುದ್ಧ ಟ್ರಂಪ್ ಮತ್ತೆ ವಾಗ್ದಾಳಿ | ಕೊರೋನಾ ಕ್ರೂರಸರ್ಪಕ್ಕೆ ಹಾಲೆರೆದ ಚೀನಾ !

ವಾಷಿಂಗ್‌ಟನ್ : ಕೊರೋನಾ ಸೋಂಕಿನ ಕ್ರೂರ ಸರ್ಪವನ್ನು ಬೆಳೆಸಿದ್ದು ಚೀನಾ ದೇಶವೇ ಎಂದು ಅಮೆರಿಕ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಕಿಡಿಕಾರಿದ್ದಾರೆ.
ಶ್ವೇತಭವನದಲ್ಲಿ ಅವರು ಸುದ್ದಿಗಾರರ ಜೊತೆ ಮಾತನಾಡಿ, ಇಡೀ ಪ್ರಪಂಚವನ್ನು ಕೊರೋನಾ ಮಹಾಮಾರಿ ಕೂಪದಲ್ಲಿ ತಳ್ಳಿ ಚೀನಾ ಘೋರ ತಪ್ಪು ಮಾಡಿದೆ. ಇದನ್ನು ಮರೆಯಲು ಸಾಧ್ಯವೇ ಇಲ್ಲ. ಕೊರೋನಾ ಎಂಬ ಕ್ರೂರ ಸರ್ಪವನ್ನು ಹುಟ್ಟುಹಾಕಿದ್ದು ಮತ್ತು ಸಾಕಿದ್ದು ಚೀನಾ ದೇಶವೇ . ಈ ವಿಷಯದಲ್ಲಿ ಲವಲೇಶವೂ ಸಂದೇಹವಿಲ್ಲ ಎಂದು ಟ್ರಂಪ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಚೀನಾ ಈ ಧೋರಣೆಯಿಂದ ಈಗಾಗಲೇ ಅಮರಿಕ ಬಹಳವಾಗಿ ನಷ್ಟ ಅನುಭವಿಸುವಂತಾಗಿದೆ. ಇದಕ್ಕೆ ಪರಿಹಾರವಾಗಿ ಚೀನಾ ದೇಶದ ಉತ್ಪಾದನೆ ಮತ್ತು ವಿವಿಧ ವಸ್ತುಗಳ ಮೇಲೆ ಅಮೆರಿಕ ಅಧಿಕ ತೆರಿಗೆ ವಿಧಿಸುವುದಂತೂ ಖಂಡಿತ ಎಂದು ಅವರು ಹೇಳಿದರು.
ಅಮೆರಿಕದಲ್ಲಿ ನೆಲೆಯಾಗಿರುವ ಚೀನಾ ದೇಶದ ಪ್ರಮುಖ ಟೆಲಿಕಾಂ ಕಂಪನಿಗಳನ್ನು ತೆರವುಗೊಳಿಸಲು ಫೆಡರಲ್ ಕಮೀಷನ್ ಈಗಾಗಲೇ ನೋಟಿಸ್ ಜಾರಿಗೊಳಿಸಿದೆ. ಈ ನಡುವೆ ವುಹಾನ್ ನಗರವನ್ನು ಕೊರೋನಾ ಮುಕ್ತ ಮಾಡಿದ ಚೀನಾ ಆಡಳಿತವನ್ನು ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚಗೆ ವ್ಯಕ್ತಪಡಿಸಿರುವುದು ಅಮೆರಿಕಾ ಕೋಪಾವೇಶವನ್ನು ಮತ್ತಷ್ಟು ಹೆಚ್ಚಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss