Latest Posts

ಕಾಸರಗೋಡು| ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿಯಿಂದ ಗೌರವ

ಕಾಸರಗೋಡು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಕರಸೇವೆಗಾಗಿ ತೆರಳಿದ್ದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ತೆರಳಿ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 149 ಪಾಸಿಟಿವ್ ಪ್ರಕರಣ ದೃಢ, 82 ಮಂದಿ ಗುಣಮುಖ, 10 ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಕೊರೋನಾಗೆ 10 ಮಂದಿ ಬಲಿಯಾಗಿದ್ದು, 149 ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. 82 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬುಧವಾರ ದೃಢಗೊಂಡ 149 ಪ್ರಕರಣಗಳ ಪೈಕಿ 64 ಮಂದಿಗೆ...

ಉಡುಪಿ ಜಿಲ್ಲೆಯಲ್ಲಿ ಬುಧವಾರ 173 ಜನರಿಗೆ ಕೊರೋನಾ ಪಾಸಿಟಿವ್ ದೃಢ: ಡಾ. ಸುಧೀರ್‌ಚಂದ್ರ ಸೂಡ

ಉಡುಪಿ: ಜಿಲ್ಲೆಯಲ್ಲಿ ಬುಧವಾರ 173 ಕೋವಿಡ್-19 ಸೋಂಕು ದೃಢ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 111 ಜನರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ, ಉಳಿದ 62 ಮಂದಿಗೆ ರೋಗ ಲಕ್ಷಣಗಳಿವೆ ಎಂದು ಜಿಲ್ಲಾ ಆರೋಗ್ಯ...

ಡ್ರ್ಯಾಗನ್‌ನಿಂದ ಜೀವಬೆದರಿಕೆಯಲ್ಲಿದ್ದಾರೆ | ಕೊರೋನಾ ಚೀನಾಕ್ಕೆ ಮೊದಲೇ ಗೊತ್ತಿತ್ತು, ಮುಚ್ಚಿಟ್ಟಿತು ಎಂದ ವೈರಾಣು ತಜ್ಞೆ ಯಾನ್

sharing is caring...!

ಹಾಂಕಾಂಗ್: ಜಗತ್ತಿಗೆ ಕೊರೋನಾ ವೈರಾಣು ಹೆಮ್ಮಾರಿಯನ್ನು ಹರಡಿದ ಕುಟಿಲ ಚೀನಾಕ್ಕೆ ಕೊರೋನಾ ಸೋಂಕಿನ ಬಗ್ಗೆ ಮೊದಲೇ ಗೊತ್ತಿತ್ತು. ಆದರೆ ಇದನ್ನು ಮುಚ್ಚಿಡಲು ಚೀನಾದ ಅತ್ಯುನ್ನತ ಸರಕಾರಿ ಮಟ್ಟದಲ್ಲೇ ಯತ್ನ ನಡೆದಿತ್ತೆಂಬ ಆಘಾತಕಾರಿ ಸತ್ಯವನ್ನು ಹಾಂಕಾಂಗ್‌ನ ವೈರಾಣು ತಜ್ಞೆ ಹಾಗೂ ಕೋವಿಡ್-೧೯ರ ಬಗ್ಗೆ ಅಧ್ಯಯನ ನಡೆಸಿರುವ ಮೊದಲ ತಂಡದಲ್ಲಿದ್ದ ಡಾ.ಲೀ-ಮೆಂಗೆ ಯಾನ್ ಬಹಿರಂಗಪಡಿಸಿದ್ದಾರೆ. ಈಕೆಯೀಗ ಚೀನಾದಿಂದ ಹತ್ಯಾ ಬೆದರಿಕೆ ಎದುರಿಸುತ್ತಿದ್ದು ಜೀವಭಯದಿಂದಾಗಿ ಅಮೆರಿಕದಲ್ಲಿ ಆಶ್ರಯಪಡೆದಿದ್ದಾರೆ.
ವಿಶ್ವದಾದ್ಯಂತ ಇಂದು ೧.೨ಕೋಟಿ ಜನರನ್ನು ಪೀಡಿಸುತ್ತಿರುವ ಕೋವಿಡ್-೧೯ಸೋಂಕಿನ ಬಗ್ಗೆ ಚೀನಾ ತಾನು ಹೇಳಿಕೊಂಡದ್ದಕ್ಕಿಂತ ಬಹುಮುಂಚೆಯೇ ತಿಳಿದಿತ್ತು. ಆದರೆ ಇದನ್ನು ಚೀನಾ ಸರಕಾರದ ಅತ್ಯುನ್ನತ ಮಟ್ಟದಲ್ಲೇ ಮುಚ್ಚಿಹಾಕಲಾಗಿತ್ತು ಎಂದು , ಹಾಂಕಾಂಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನಲ್ಲಿ ವೈರಾಲಜಿ ಮತ್ತು ಇಮ್ಯುನಾಲಜಿಯಲ್ಲಿ ವಿಶೇಷ ತಜ್ಞ ವಿಜ್ಞಾನಿಯಾಗಿದ್ದ ಲೀ -ಮೆಂಗ್ ಯಾನ್ ಬಯಲಿಗೆಳೆದಿದ್ದಾರೆ.
ಚೀನಾಕ್ಕೆ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‌ಒ)ಗೆ ಕೋವಿಡ್-೧೯ರ ಬಗ್ಗೆ ತಿಳಿಸಬೇಕಾದ ಹೊಣೆಗಾರಿಕೆಯಿತ್ತು. ಆದರೆ ಅದು ಹಾಗೆ ಮಾಡದೆ ಇದನ್ನು ಮುಚ್ಚಿಹಾಕಿ ಅತ್ಯಂತ ಘೋರ ಪ್ರಮಾದವೆಸಗಿದೆ ಎಂಬುದಾಗಿ ಇನ್‌ಫ್ಲೂಯೆನ್ಝಾ ವೈರಸ್ ಮತ್ತು ಸಾಂಕ್ರಾಮಿಕಗಳಿಗೆ ಸಂಬಂಸಿದ ಪ್ರಯೋಗಾಲಯ ಮಾಹಿತಿಗಳನ್ನು ಉಲ್ಲೇಖಿಸಿ ಆಕೆ ಫ್ಯಾಕ್ಸ್ ನ್ಯೂಸ್‌ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಡಾ.ಯಾನ್ ಕೋವಿಡ್-೧೯ಕ್ಕೆ ಸಂಬಂಸಿದ ಅತ್ಯುನ್ನತ ತಜ್ಞರು ಒಳಗೊಂಡ ವಿಶೇಷಜ್ಞರ ಜೊತೆ ಕೆಲಸ ಮಾಡಿದ್ದು, ಈ ವಿಶೇಷಜ್ಞರು ಕೂಡಾ ಇದರ ಸಂಶೋಧನೆ ಕುರಿತಂತೆ ನಿರ್ಲಕ್ಷ್ಯ ಮಾಡಿದ್ದರು. ಚೀನಾ ಜವಾಬ್ದಾರಿಯಿಂದ ವರ್ತಿಸಿದ್ದರೆ ದೊಡ್ಡ ಸಂಖ್ಯೆಯಲ್ಲಿ ಬಲಿಯಾಗಿರುವ ಜನರ ಜೀವ ಉಳಿಸಲು ಸಾಧ್ಯವಿತ್ತು ಎನ್ನುತ್ತಾರೆ.ಯಾನ್ ಕೋವಿಡ್-೧೯ರ ಬಗ್ಗೆ ಅಧ್ಯಯನ ನಡೆಸಿದ ವಿಶ್ವದ ಮೊದಲ ವಿಜ್ಞಾನಿಗಳಲ್ಲೊಬ್ಬರಾಗಿದ್ದಾರೆ. ಆಕೆಯ ಸೂಪರ್‌ವೈಸರ್ ಡಾ.ಲಿಯೋ ಪೂನ್ ಡಿಸೆಂಬರ್ ೨೦೧೯ರಲ್ಲೇ ಸಾರ್ಸ್ ಮಾದರಿಯ ಪ್ರಕರಣಗಳು ಚೀನಾದ ಮುಖ್ಯ ಪ್ರದೇಶಗಳಲ್ಲಿ ಕಂಡುಬಂದಿರುವುದನ್ನು ಅರುಹಿದ್ದರು. ಆದರೆ ಚೀನಾ ಸರಕಾರ ವಿಶ್ವದ ತಜ್ಞರು ಈ ಬಗ್ಗೆ ಅಧ್ಯಯನ ನಡೆಸಲು ಅವಕಾಶ ನಿರಾಕರಿಸಿತು ಎನ್ನುತ್ತಾರೆ.
ತಾನು ಮತ್ತು ಚೀನಾದಾದ್ಯಂತ ಇರುವ ತನ್ನ ಸಹೋದ್ಯೋಗಿಗಳು ಈ ವಿಶೇಷ ವೈರಾಣು ಬಗ್ಗೆ ಚರ್ಚಿಸಿದ್ದೆವು.ಆದರೆ ಶೀಘ್ರವೇ ವೈದ್ಯರು , ಸಂಶೋಧಕರು ಈ ಬಗ್ಗೆ ಚರ್ಚಿಸುವುದನ್ನು ಹಠಾತ್ ಆಗಿ ಬಂದ್ ಮಾಡಿದರು.ಇವರಲ್ಲಿ , ಕೊರೋನಾ ಸೋಂಕು ಸೃಷ್ಟಿಯ ವುಹಾನ್‌ನಿಂದ ಬಂದವರೂ ಸೇರಿದ್ದರು. ಅವರು ಮೌನವಹಿಸಿದ್ದೇ ಅಲ್ಲದೆ, ಇತರರು ಕೂಡಾ ಈ ಬಗ್ಗೆ ಚರ್ಚಿಸದಂತೆ ಎಚ್ಚರಿಕೆ ನೀಡಲಾಯಿತು.
“ನಾವು ಇದರ (ಕೋವಿಡ್-೧೯)ರ ಬಗ್ಗೆ ಮಾತನಾಡಬಾರದು. ಆದರೆ ನಾವು ಮಾಸ್ಕ್ ಧರಿಸುವುದು ಅಗತ್ಯ “ಎನ್ನಲಾಯಿತು.ಆದರೆ ಮಾನವರಿಂದ ಮಾನವರಿಗೆ ಹರಡುವ ಪ್ರಕರಣಗಳು ಒಂದೇ ಸವನೆ ಏರಲಾರಂಭಿಸಿತು.ಕೊನೆಗೆ ಅಪಾಯದ ಸುಳಿವರಿತ ಡಾ.ಯಾನ್ ಇಲ್ಲಿಂದ ಜಾಗ ಕಾಲಿ ಮಾಡಲು ನಿರ್ಧರಿಸಿದ್ದಾರೆ. ಏ.೨೮ರಂದು ತನ್ನ ಬ್ಯಾಗ್‌ಗಳನ್ನು ತುಂಬಿಕೊಂಡು ಕ್ಯಾಂಪಸ್‌ನ ಸೆನ್ಸಾರ್‌ಗಳು ಮತ್ತು ವೀಡಿಯೋ ಕ್ಯಾಮರಾಗಳ ಕಣ್ಣು ತಪ್ಪಿಸಿ ಅಮೆರಿಕಕ್ಕೆ ವಿಮಾನದಲ್ಲಿ ಬಂದುಬಿಟ್ಟೆ ಎಂದಿದ್ದಾರೆ.
ತಾನು ತನ್ನೆಲ್ಲ ಪ್ರೀತಿಪಾತ್ರರನ್ನು ಬಿಟ್ಟು ಬಂದೆ.ಒಂದು ವೇಳೆ ನಾನು ಅವರ ವಶಕ್ಕೆ ಸಿಕ್ಕಿಕೊಂಡದ್ದೇ ಆದಲ್ಲಿ ತನ್ನನ್ನು ಒಂದೋ ಜೈಲಿಗೆ ತಳ್ಳಲಾಗುತ್ತಿತ್ತು. ಇಲ್ಲವೇ ತನ್ನ ಕಥೆ ಮುಗಿಸಲಾಗುತ್ತಿತ್ತು ಎಂದು ಅಜ್ಞಾತ ಸ್ಥಳದಲ್ಲಿರುವ ಯಾನ್ ಹೇಳುತ್ತಾರೆ.ಇದೀಗ ತನ್ನನ್ನ ಗೌರವವನ್ನು ಮಣ್ಣುಪಾಲು ಮಾಡಲು ಯತ್ನ ನಡೆದಿದೆ.ಸರಕಾರಿ ಗೂಂಡಾಗಳು ತನ್ನ ಬಾಯಿ ಮುಚ್ಚಿಸುವುದಕ್ಕಾಗಿ ತನ್ನ ವಿರುದ್ಧ ಸೈಬರ್ ದಾಳಿಗೂ ಯತ್ನಿಸುತ್ತಿದ್ದಾರೆ.ಖ್ವಿಂಗ್ಡಾವೋದಲ್ಲಿರುವ ತನ್ನ ಸಣ್ಣ ಅಪಾರ್ಟ್‌ಮೆಂಟ್‌ನಲ್ಲಿರುವ ತಂದೆತಾಯಿಯನ್ನು ಬೆದರಿಸಲಾಗುತ್ತಿದೆ.ಅವರು , ನೀನು ಮನೆಗೆ ಬಂದುಬಿಡು.ಹೋರಾಟವನ್ನು ತ್ಯಜಿಸಿ ಬಾ ಎಂದು ಅಂಗಲಾಚುತ್ತಿದ್ದಾರೆ ಎಂದಿದ್ದಾರೆ ಯಾನ್.
ತಾನೀ ಕ್ಷಣದಲ್ಲೂ ಅಪಾಯದಲ್ಲಿದ್ದೇನೆ.ತಾನು ಇನ್ನೆಂದೂ ತನ್ನ ಮನೆಗೆ ಹಿಂತಿರುಗಲು ಸಾಧ್ಯವಿಲ್ಲ. ತಾನಿನ್ನೆಂದೂ ತನ್ನ ಸ್ನೇಹಿತರು, ಕುಟುಂಬ ಸದಸ್ಯರನ್ನು ಮತ್ತೆ ನೋಡಲು ಸಾಧ್ಯವಿಲ್ಲ ಎಂಬ ಕಟು ಸತ್ಯದೊಂದಿಗೆ ನಾನಿನ್ನು ಬಾಳಬೇಕಾಗಿದೆ ಎಂದು ಅವರು ಹೇಳುತ್ತಾರೆ.

Latest Posts

ಕಾಸರಗೋಡು| ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿಯಿಂದ ಗೌರವ

ಕಾಸರಗೋಡು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಕರಸೇವೆಗಾಗಿ ತೆರಳಿದ್ದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ತೆರಳಿ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 149 ಪಾಸಿಟಿವ್ ಪ್ರಕರಣ ದೃಢ, 82 ಮಂದಿ ಗುಣಮುಖ, 10 ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಕೊರೋನಾಗೆ 10 ಮಂದಿ ಬಲಿಯಾಗಿದ್ದು, 149 ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. 82 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬುಧವಾರ ದೃಢಗೊಂಡ 149 ಪ್ರಕರಣಗಳ ಪೈಕಿ 64 ಮಂದಿಗೆ...

ಉಡುಪಿ ಜಿಲ್ಲೆಯಲ್ಲಿ ಬುಧವಾರ 173 ಜನರಿಗೆ ಕೊರೋನಾ ಪಾಸಿಟಿವ್ ದೃಢ: ಡಾ. ಸುಧೀರ್‌ಚಂದ್ರ ಸೂಡ

ಉಡುಪಿ: ಜಿಲ್ಲೆಯಲ್ಲಿ ಬುಧವಾರ 173 ಕೋವಿಡ್-19 ಸೋಂಕು ದೃಢ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 111 ಜನರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ, ಉಳಿದ 62 ಮಂದಿಗೆ ರೋಗ ಲಕ್ಷಣಗಳಿವೆ ಎಂದು ಜಿಲ್ಲಾ ಆರೋಗ್ಯ...

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾಗೆ ಕೊರೋನಾ ಪಾಸಿಟಿವ್ ದೃಢ

ಮಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸಿಎಂ ಯಡಿಯೂರಪ್ಪ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದರಿಂದ ಸೋಂಕು ತಗುಲಿರಬಹುದು ಎಂದು ಅಂದಾಜಿಸಲಾಗಿದೆ. ಬೆಂಗಳೂರಿನಲ್ಲಿ ಸಿಎಂ ಜೊತೆಗಿದ್ದ ಹರೀಶ್ ಪೂಂಜಾ ಅವರು ಸಿಎಂಗೆ...

Don't Miss

ಕಾಸರಗೋಡು| ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿಯಿಂದ ಗೌರವ

ಕಾಸರಗೋಡು: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ಕರಸೇವೆಗಾಗಿ ತೆರಳಿದ್ದ  ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರ ಮನೆಗೆ ತೆರಳಿ ಬಿಜೆಪಿ ಕುಂಬ್ಡಾಜೆ ಪಂಚಾಯತ್ ಸಮಿತಿ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ 149 ಪಾಸಿಟಿವ್ ಪ್ರಕರಣ ದೃಢ, 82 ಮಂದಿ ಗುಣಮುಖ, 10 ಬಲಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಕೊರೋನಾಗೆ 10 ಮಂದಿ ಬಲಿಯಾಗಿದ್ದು, 149 ಪಾಸಿಟಿವ್ ಪ್ರಕರಣ ದೃಢಪಟ್ಟಿದೆ. 82 ಮಂದಿ ಗುಣಮುಖಗೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬುಧವಾರ ದೃಢಗೊಂಡ 149 ಪ್ರಕರಣಗಳ ಪೈಕಿ 64 ಮಂದಿಗೆ...

ಉಡುಪಿ ಜಿಲ್ಲೆಯಲ್ಲಿ ಬುಧವಾರ 173 ಜನರಿಗೆ ಕೊರೋನಾ ಪಾಸಿಟಿವ್ ದೃಢ: ಡಾ. ಸುಧೀರ್‌ಚಂದ್ರ ಸೂಡ

ಉಡುಪಿ: ಜಿಲ್ಲೆಯಲ್ಲಿ ಬುಧವಾರ 173 ಕೋವಿಡ್-19 ಸೋಂಕು ದೃಢ ಪ್ರಕರಣಗಳು ಪತ್ತೆಯಾಗಿವೆ. ಇವರಲ್ಲಿ 111 ಜನರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ, ಉಳಿದ 62 ಮಂದಿಗೆ ರೋಗ ಲಕ್ಷಣಗಳಿವೆ ಎಂದು ಜಿಲ್ಲಾ ಆರೋಗ್ಯ...
error: Content is protected !!