Tuesday, June 28, 2022

Latest Posts

ತಂಗಿಯ ಮದುವೆ ಮಂಟಪಕ್ಕೆ ತಂದೆಯನ್ನು ‘ತಂದು ನಿಲ್ಲಿಸಿ’ ಅಚ್ಚರಿಗೊಳಿಸಿದ ಅಕ್ಕ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಮದುವೆಯ ಸಂಭ್ರಮದ ಕ್ಷಣದಲ್ಲಿ ತಂದೆ ಇಲ್ಲವಲ್ಲ ಎಂಬ ಮದುಮಗಳ ಕೊರಗನ್ನು ಎದುರಿಗೆ ತಂದೆಯನ್ನು ‘ತಂದು ನಿಲ್ಲಿಸಿ’ ನೀಗಿಸಿದ ವಿಲಕ್ಷಣ ವಿದ್ಯಮಾನವೊಂದು ಈಗ ಭರ್ಜರಿ ಪ್ರಚಾರ ಪಡೆದುಕೊಳ್ಳುತ್ತಿದೆ.
ಈ ಘಟನೆ ನಡೆದಿದ್ದು ತಮಿಳುನಾಡಿನ ಪುದುಕೊಟ್ಟಾಯಿಯಲ್ಲಿ. ತಂದೆಯನ್ನು ಕಳೆದುಕೊಂಡಿರುವ ಭುವನೇಶ್ವರಿ ಎಂಬವರ ಮದುವೆ ನಡೆಯುತ್ತಿತ್ತು. ಈ ಹೊತ್ತಿನಲ್ಲಿ ಆಕೆಗೆ ತಂದೆಯ ಅಗಲಿಕೆಯ ನೋವು ತೀವ್ರವಾಗಿ ಕಾಡುತ್ತಿತ್ತು. ಇದನ್ನು ಅರಿತ ಆಕೆಯ ಅಕ್ಕ ಲಕ್ಷ್ಮಿಪ್ರಭಾ, ತಂದೆಯನ್ನು ತಂದು ತಂಗಿಯ ಎದುರಿಗೆ ನಿಲ್ಲಿಸಿದ್ದಾರೆ. ಅಷ್ಟಕ್ಕೂ ಲಕ್ಷ್ಮಿಪ್ರಭಾ ತಂದು ನಿಲ್ಲಿಸಿದ್ದು ಥೇಟ್ ತಂದೆಯದ್ದೇ ಪ್ರತಿರೂಪದ ಮೂರ್ತಿಯನ್ನು.
ಬರೋಬ್ಬರಿ ಆರು ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮೂರ್ತಿಯನ್ನು ನಿರ್ಮಿಸಲಾಗಿತ್ತು. ತಂಗಿಯೂ ಸೇರಿದಂತೆ ಮನೆಯಲ್ಲಿ ಯಾರಿಗೂ ತಿಳಿಸದೇ ಲಕ್ಷ್ಮಿಪ್ರಭಾ ಮದುವೆಯ ಸಂದರ್ಭದಲ್ಲಿ ಮಂಟಪಕ್ಕೆ ತಂದು ನಿಲ್ಲಿಸಿ ಅಚ್ಚರಿ ಮೂಡಿಸಿದ್ದರು. ೬ ಲಕ್ಷ ರೂಪಾಯಿ ನಮ್ಮಂಥವರಿಗೆ ಅತ್ಯಂತ ದುಬಾರಿಯೇ. ಆದರೆ ತಂಗಿಯ ಜೀವನದ ಅತ್ಯಂತ ಖುಷಿಯ ಕ್ಷಣದಲ್ಲಿ ತಂದೆಯ ಅನುಪಸ್ಥಿತಿ ಕಾಡಬಾರದು ಎನ್ನುವ ಕಾರಣಕ್ಕೆ ದುಬಾರಿಯಾದರೂ ಇದನ್ನು ಮಾಡಿಸಿದ್ದೇನೆ. ತಂಗಿಯ ಸಂತೋಷದ ಮುಂದೆ ಈ ಬೆಲೆ ಹೆಚ್ಚಲ್ಲ ಎಂದಿದ್ದಾರೆ ಲಕ್ಷ್ಮಿಪ್ರಭಾ.
ಈ ಅಕ್ಕ-ತಂಗಿಯ ಪ್ರೀತಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss