ನಿಂಬೆ ಹಣ್ಣಿನ ರಸವು ನಮ್ಮ ದೇಹಕ್ಕೆ ಶಕ್ತಿ ನೀಡಿ ನಮ್ಮಲ್ಲಿನ ನಿಶಕ್ತಿಯನ್ನು ದೂರ ಮಾಡುವಲ್ಲಿ ಸಹಾಯ ಮಾಡುತ್ತದೆ. ಆದರೆ ಅಂತಹ ನಿಂಬೆ ಹಣ್ಣಿನ ಜ್ಯೂಸ್ ನಿಂದ ನಮ್ಮ ದೇಹದಲ್ಲಾಗುವ ಬದಲಾವಣೆಗಳ ಬಗ್ಗೆ ನೀವು ತಿಳಿದರೆ ಅಚ್ಚರಿ ಪಡುತ್ತೀರಿ.
ಹಾಗಿದ್ದರೆ ಬನ್ನಿ ಮದಲಿಗೆ ರುಚಿಯದ ಸಿಹಿಬರಿತ ನಿಂಬು ಪಾನಿ ಮಾಡೋದು ತಿಳಿಯೋಣ:
ಬೇಕಾಗುವ ಪದಾರ್ಥಗಳು:
ನಿಂಬೆಹಣ್ಣಿನ ರಸ: 2 ಕಪ್
ನೀರು
ಏಲಕ್ಕಿ ಪುಡಿ
ಸಕ್ಕರೆ ಅಥವಾ ಜೇನುತುಪ್ಪ
ಮಾಡುವ ವಿಧಾನ: ಒಂದು ಪಾತ್ರೆಯಲ್ಲಿ ನಿಂಬು ರಸ, ಏಲಕ್ಕಿ ಪುಡಿ, ಸಕ್ಕರೆ ಅಥವಾ ಜೇನುತುಪ್ಪ ಹಾಕಿ, ನೀರು ಬೆರಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ತಯಾರಾದ ನಿಂಬು ಜ್ಯೂಸ್ ಅನ್ನು ತಣ್ಣಗಾಗುವವರೆಗೆ ಫ್ರಿಡ್ಜ್ ನಲ್ಲಿ ಇಟ್ಟು ಸೇವಿಸಬಹುದು. ಅಥವಾ ಹಾಗೆಯೂ ಫ್ರೆಶ್ ಆಗಿ ಸೇವಿಸಬಹುದು.
ನಿಂಬೆಹಣ್ಣಿನಲ್ಲಿನ ಪ್ರೋಟೀನ್ಸ್, ಕಾರ್ಬೋಹೈಡ್ರೇಟ್ಸ್, ವಿಟಮಿನ್ ಸಿ, ಬಿ, ಇಗಳು ಇದ್ದು, ಆರೋಗ್ಯಕ್ಕೆ ಸಹಾಯವಾಗಲಿದೆ.
ಹೃದಯ: ನಿಂಬೆ ಹಣ್ಣಿನಲ್ಲಿನ ವಿಟಮಿನ್ ಸಿ ಅಂಶವು ಹೃದಯಕ್ಕೆ ಒಳ್ಳೆಯದು. ನಿಂಬೆ ಹಣ್ಣಿನ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆ, ಸ್ಟ್ರೋಕ್ ಸೇರಿದಂತೆ ಇತರೆ ಕಾಯಿಲೆಗಳಿಗೆ ರಾಮಬಾಣವಾಗಿದೆ.
ದೇಹದ ತೂಕ: ನಿಂಬೆ ಹಣ್ಣಿನಿಂದ ನಮ್ಮ ದೇಹದಲ್ಲಿನ ತೂಕ ಇಳಿಕೆಯಾಗಲಿದೆ. ಪ್ರತಿದಿನ ನೀರಿನ ಜೊತೆ ನಿಂಬೆ ರಸ ಹಾಕಿ ಸೇವಿಸುವುದರಿಂದ ತೂಕ ಕಡಿಮೆಯಾಗುತ್ತದೆ.
ಮೂತ್ರಪಿಂಡದ ಸಮಸ್ಯೆ: ಮೂತ್ರಪಿಂಡದಲ್ಲಿ ಸಣ್ಣ ಸಣ್ಣ ರಂದ್ರಗಳಂತೆ ರೂಪುಗೊಳ್ಳುವ ಕಲ್ಲುಗಳನ್ನು ದೂರ ಮಾಡುತ್ತದೆ.
ರಕ್ತ ಹೀನತೆ: ನಿಂಬೆಹಣ್ಣಿನಲ್ಲಿರುವ ವಿಟಮಿನ್ ಸಿ,ಕಬ್ಬಿಣ ಅಂಶವು ರಕ್ತ ಹೀನತೆಯನ್ನು ನಿವಾರಿಸುವಲ್ಲಿ ಸಹಕಾರಿಯಾಗಲಿದೆ.
ತ್ವಚೆಯ ಕಾಂತಿ: ವಿಟಮಿನ್ ಸಿ ಅಂಶವು ಚರ್ಮದಲ್ಲಿ ಆಗುವ ಸುಕ್ಕುಗಳನ್ನು, ಟ್ಯಾನ್ ಗಳನ್ನು ದೂರ ಮಾಡಲು ಸಹಾಯ ಮಾಡುತ್ತದೆ.