Tuesday, June 28, 2022

Latest Posts

ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆ: 25 ಪ್ರಕರಣ ದಾಖಲು

ಹೊಸ ದಿಗಂತ ವರದಿ, ಚಿತ್ರದುರ್ಗ:

ತಂಬಾಕು ನಿಯಂತ್ರಣ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಗರ ಪ್ರದೇಶದ ವಿವಿಧ ಅಂಗಡಿಗಳ ಮೇಲೆ ಜಿಲ್ಲಾಮಟ್ಟದ ತಂಬಾಕು ತನಿಖಾ ತಂಡವು ಮಂಗಳವಾರ ದಾಳಿ ನಡೆಸಿ 25 ಪ್ರಕರಣಗಳ ದಾಖಲಿಸಿ ತಂಡ ವಿಧಿಸಿದೆ.
ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಕೋಟ್ಪಾ-2003ರ ಅನ್ವಯ ಜಿಲ್ಲಾ ಮಟ್ಟದ ತಂಬಾಕು ತನಿಖಾ ತಂಡವು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ನಗರ ಪ್ರದೇಶಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟಗಾರರ ಅಂಗಡಿಗಳಿಗೆ ದಾಳಿಯನ್ನು ನಡೆಸಿದೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ, ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ.ವಿ.ತುಳಸಿ ರಂಗನಾಥ್ ಅವರ ನೇತೃತ್ವದಲ್ಲಿ ಕೋಟ್ಪಾ-2003ರ ಕಾಯ್ದೆಯ ಕುರಿತು ಜಾಗೃತಿಯನ್ನು ನೀಡಿ ಸಂಬಂಧಪಟ್ಟ ಸೆಕ್ಷನ್-4, 6ಎ ಮತ್ತು 6ಬಿ ಬೋರ್ಡ್‌ಗಳನ್ನು ಹಾಕಲು ಸೂಚಿಸಲಾಯಿತು. ಸೆಕ್ಷನ್-4 ಅಡಿಯಲ್ಲಿ 13 ಕೇಸುಗಳನ್ನು ದಾಖಲಿಸಿ ರೂ.1350 ದಂಡವನ್ನು ಮತ್ತು ಸೆಕ್ಷನ್-6ಎ ಅಡಿಯಲ್ಲಿ 12 ಕೇಸುಗಳನ್ನು ದಾಖಲಿಸಿ ರೂ. 1050 ದಂಡವನ್ನು ವಸೂಲಿ ಮಾಡಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ ಅವರು ಮಾತನಾಡಿ, ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಲಾಗಿದೆ ಎಂದು ತಿಳಿಸಿ ಆಗಾಗ ದಾಳಿ ನಡೆಸಿ ಕೇಸುಗಳನ್ನು ದಾಖಲಿಸುವುದಾಗಿ ಎಚ್ಚರಿಸಿದರು.
ತಂಬಾಕು ದಾಳಿಯಲ್ಲಿ ಜಿಲ್ಲಾ ಮಟ್ಟದ ತನಿಖಾ ತಂಡದ ಅಧಿಕಾರಿಗಳಾದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್, ಹಿರಿಯೂರು ಪಿಎಸ್‌ಐ ಅನುಸೂಯ, ಸಿಪಿಸಿ ಟಿ.ಪರಮೇಶ್, ಸಿಹೆಚ್‌ಸಿ ಶಿವಕುಮಾರ್, ಕಿರಿಯ ಪುರುಷ ಆರೋಗ್ಯ ಸಹಾಯಕರಾದ ಜೆ.ರಂಗಸ್ವಾಮಿ, ಪಿ.ಪ್ರಶಾಂತ್, ಸಮಾಜ ಕಾರ್ಯಕರ್ತರ ಕೆ.ಎಂ.ತಿಪ್ಪೇಸ್ವಾಮಿ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss