ಹೊಸದಿಗಂತ ವರದಿ, ಬೀದರ್:
ನಗರದ ವ್ಯಾಪ್ತಿಯ ಗಾಂದಿ ಗಂಜ್, ಚೌಬಾರ ನ್ಯೂಟೌನ್ ಮತ್ತು ಮಾರ್ಕೆಟ್ ಠಾಣೆಗಳ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಳಿಗೆಗಳ ಮೇಲೆ ಜ.22ರಂದು ದಾಳಿ ನಡೆಸಲಾಗಿದೆ.
ಜಿಲ್ಲಾ ಕಾರ್ಯಕ್ರಮ ಅಧಿಕಾರಿಗಳಾದ ಡಾ.ಎಲ್ ಕೃಷ್ಣಾ ರೆಡ್ಡಿ ಅವರ ಮಾರ್ಗದರ್ಶನದಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ನಗರ ಸಭೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟಗಳ ಪ್ರಾಧಿಕಾರ, ಬೀದರ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗಳ ಸಹಭಾಗಿತ್ವದಲ್ಲಿ ತಂಬಾಕು ಜಾಗೃತಿ ದಾಳಿ ಸಂಘಟಿಸಲಾಯಿತು.
ಈ ಜಾಗೃತಿ ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಕಾರ್ಯಕ್ರಮ ಸಲಹೆಗಾರರಾದ ಪ್ರಕಾಶ ವಗ್ಗೆ, ಮಹೇಶ ಬಬಛಡೆ, ಅರುಣ ಪಾಟೀಲ್, ಆಹಾರ ಸುರಕ್ಷತೆ ಅಧಿಕಾರಿ ಅರವಿಂದ ಡಾಂಗೆ, ನಗರ ಸಭೆಯ ಸಂಗಮೇಶ ಸಂಬoಧಿತ ಪೊಲೀಸ್ ಠಾಣೆಗಳ ಪ್ರತಿನಿಧಿಗಳು ಈ ದಾಳಿಯಲ್ಲಿ ಭಾಗವಹಿಸಿದರು.