Friday, September 25, 2020
Friday, September 25, 2020

Latest Posts

ಸತೀಶ್ ನೀನಾಸಂ- ವಿಜಯ್ ಪ್ರಸಾದ್ ಕಾಂಬಿನೇಷನಲ್ಲಿ ಮತ್ತೊಂದು ಹೊಸ ಸಿನಿಮಾ, ಯಾವುದು ಗೊತ್ತಾ?

ಈಗಾಗಲೇ ಸತೀಶ್ ನೀನಾಸಂ ಮತ್ತು ’ಸಿದ್ಲಿಂಗು’ ಖ್ಯಾತಿಯ ವಿಜಯ್ ಪ್ರಸಾದ್ ಕಾಂಬಿನೇಷನ್ನಲ್ಲಿ ಎರಡು ಸಿನಿಮಾ ಬರಬೇಕಿತ್ತು. ಆದ್ರೆ, ಪ್ರಾಜೆಕ್ಟ್ ಟೇಕ್ ಆನ್ ಆಗಲಿಲ್ಲ. ಈಗ ಮೂರನೇ ಬಾರಿ ಸಿನಿಮಾ ಮಾಡಲು ಇಬ್ಬರು ಮನಸ್ಸು...

ಎಸ್‌ಪಿಬಿ ಆರೋಗ್ಯ ಸ್ಥಿತಿ ಗಂಭೀರ: ಗಾಯನ ಲೋಕದ ಗಂಧರ್ವನ ಚೇತರಿಕೆಗಾಗಿ ಅಭಿಮಾನಿಗಳಿಂದ ದೇವರಿಗೆ ಮೊರೆ

ಚೆನ್ನೈ: ಗಾಯನ ಲೋಕದ ಮಹಾನ್ ಪ್ರತಿಭೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದ್ದು, ಅವರ ಚೇತರಿಕೆಗಾಗಿ ದೇಶದ ಎಲ್ಲೆಡೆ ಕೋಟ್ಯಾಂತರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ನುರಿತ ವೈದ್ಯರುಗಳ ತಂಡ ಎಸ್‌ಪಿಬಿ ಆರೋಗ್ಯದ...

ಸಿಬಿಎಸ್‌ಇ 12ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶ ಅಕ್ಟೋಬರ್ 10ರ ಒಳಗೆ ಪ್ರಕಟ

ನವದೆಹಲಿ: ಸಿಬಿಎಸ್‌ಇ ೧೨ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶವನ್ನು ಅಕ್ಟೋಬರ್ ೧೦ರ ಒಳಗೆ ಪ್ರಕಟಿಸಲಾಗುವುದು ಎಂದು ಸಿಬಿಎಸ್‌ಇ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಸಿಬಿಎಸ್‌ಇ ಫಲಿತಾಂಶ ಅಧಿಕೃತ ಸಿಬಿಎಸ್‌ಇ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗಲಿದೆ. ಪೂರಕ ಪರೀಕ್ಷೆ ಹಾಗೂ...

ತಜಕಿಸ್ಥಾನದ ಪಮಿರ್ ಪರ್ವತಶ್ರೇಣಿ ಮೇಲೆ ಚೀನಾ ವಕ್ರದೃಷ್ಟಿ!

sharing is caring...!

ದಿಲ್ಲಿ: ಆಕ್ರಮಣ ಪ್ರವೃತ್ತಿಯ ಕಾಲ ಮುಗಿಯಿತೆಂದು ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಗೆ ಎಚ್ಚರಿಸಿರುವಂತೆಯೇ, ನೆರೆ ರಾಷ್ಟ್ರಗಳ ಭೂಮಿಯನ್ನು ನುಂಗಿ ನೀರು ಕುಡಿಯುವಲ್ಲಿ ಕುಖ್ಯಾತ ಚೀನಾದ ಕೆಟ್ಟ ದೃಷ್ಟಿಯೀಗ ಮಧ್ಯ ಏಷ್ಯಾದ ಬಡ ರಾಷ್ಟ್ರಗಳಲ್ಲೊಂದಾದ ತಜಕಿಸ್ಥಾನದ ಮೇಲೆ ನೆಟ್ಟಿದೆ. ತಜಕಿಸ್ಥಾನದ ಪಮಿರ್ ಪರ್ವತಶ್ರೇಣಿ ಚೀನಾಗೆ ಸೇರಿದ್ದೆಂದು ಚೀನಾದ ಅಧಿಕೃತ ಮಾಧ್ಯಮವು ಕಳೆದ ಕೆಲವು ವಾರಗಳಿಂದ ವರದಿ ಮಾಡುತ್ತಿದ್ದು, ಸುದ್ದಿ ಕೇಳಿದ ತಜಕಿಸ್ಥಾನ ಸರಕಾರ ದಂಗಾಗಿಬಿಟ್ಟಿದೆ.
ಪಮಿರ್ ವಲಯವಿಡೀ ಚೀನಾದ್ದು, ಇದನ್ನು ಚೀನಾಗೆ ಬಿಟ್ಟುಕೊಡಬೇಕೆಂದು ಚೀನಾದ ಇತಿಹಾಸಕಾರ ಚಾವೊ ಯಾವೊ ಲು ಎಂಬಾತ ಚೀನೀ ಮೂಲಗಳನ್ನು ಉದ್ಧರಿಸಿ ತನ್ನ ಲೇಖನವೊಂದರಲ್ಲಿ ಹೇಳಿದ್ದಾನೆ. ೧೯೧೧ರಲ್ಲಿ ಚೀನಾ ಹೊಸತಾಗಿ ರೂಪುಗೊಂಡ ನಂತರದಲ್ಲಿ, ಚೀನಾದ ಕೈತಪ್ಪಿರುವ ಭೂ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದು ಅಕಾರಿಗಳ ಕರ್ತವ್ಯ. ಕೆಲವು ಭೂ ಪ್ರದೇಶಗಳನ್ನು ಚೀನಾ ಮರು ವಶಪಡಿಸಿದೆ. ಇನ್ನಷ್ಟು ಭೂಮಿ ನೆರೆ ರಾಷ್ಟ್ರಗಳ ಹಿಡಿತದಲ್ಲಿದೆ. ಚೀನಾದ ಕೈತಪ್ಪಿರುವ ಪ್ರಾಚೀನ ವಲಯಗಳ ಪೈಕಿ ಪಮಿರ್ ಒಂದು. ಜಾಗತಿಕ ಶಕ್ತಿಗಳ ಒತ್ತಡದಿಂದಾಗಿ ಈ ವಲಯ ಕಳೆದ ೧೨೮ವರ್ಷಗಳಿಂದ ಚೀನಾದ ಹಿಡಿತಕ್ಕೆ ಮರಳಿಲ್ಲ ಎಂದು ಲೇಖಕ ಬೊಟ್ಟು ಮಾಡಿದ್ದಾನೆ.
ಚೀನಾದ ಈ ಹೊಸ ವರಸೆಯಿಂದ ತಜಕಿಸ್ಥಾನ್ ಸರಕಾರ ಗಾಬರಿಗೀಡಾಗಿದೆ. ಏಕಕಾಲಕ್ಕೆ ಮಧ್ಯ ಏಷ್ಯಾ ರಾಷ್ಟ್ರಗಳೆಲ್ಲವು ತನ್ನ ವ್ಯೂಹಾತ್ಮಕ ವ್ಯವಸ್ಥೆಯ ಭಾಗವಾಗಿರಬೇಕೆಂದು ಆಶಿಸುವ ರಷ್ಯಾ ಕೂಡ ಚೀನಾದ ಪ್ರಸ್ತುತ ಉದ್ಧಟತನವನ್ನು ಗಂಭೀರ ಪರಿಗಣಿಸಿದೆ.
೨೦೧೦ರಲ್ಲಿ ಚೀನಾ ಮತ್ತು ತಜಕಿಸ್ಥಾನಗಳು ಗಡಿ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದವು. ಒಪ್ಪಂದದ ನೆಪದಲ್ಲಿ ಪಮಿರ್ ವಲಯದ ೧,೧೫೮ ಚದರ ಕಿ.ಮೀ. ಪ್ರದೇಶವನ್ನು ತಜಕಿಸ್ಥಾನದಿಂದ ಚೀನಾ ಬಲವಂತ ಕಿತ್ತುಕೊಂಡಿತ್ತು. ಇದೀಗ ತಜಕ್-ಅಪಘಾನಿಸ್ಥಾನ ಗಡಿ ಬಳಿ ತಶ್‌ಕುರ್ಗನ್ ಎಂಬಲ್ಲಿ ಚೀನಾವು ವಿಮಾನ ನಿಲ್ದಾಣವೊಂದರ ನಿರ್ಮಾಣಕ್ಕೆ ಮುಂದಾಗಿರುವುದು ಇದರ ದುರಾಲೋಚನೆಗೆ ಇನ್ನೊಂದು ಸಾಕ್ಷಿಯಾಗಿದೆ , ಜತೆಗೆ ಆತಂಕದ ವಿಚಾರವೂ ಆಗಿದೆ.
ಈ ಮಧ್ಯೆ ತಜಕಿಸ್ಥಾನ ವಲಯದಲ್ಲಿ ಬಂಗಾರದ ನಿಕ್ಷೇಪಗಳು ಧಾರಾಳವಾಗಿವೆ. ತಜಕಿಸ್ಥಾನದಲ್ಲೇ ೧೪೫ ಬಂಗಾರದ ನಿಕ್ಷೇಪಗಳಿವೆ ಎಂದು ಚೀನೀ ವರದಿಗಳು ತಿಳಿಸಿದ್ದು, ತಜಕ್ ಸರಕಾರ ಉತ್ತರ ತಜಕಿಸ್ಥಾನದಲ್ಲಿ ಚಿನ್ನ ನಿಕ್ಷೇಪಗಳ ಗಣಿಗಾರಿಕೆ ಮತ್ತು ಅಭಿವೃದ್ಧಿಗೆ ಚೀನೀ ಕಂಪೆನಿಯೊಂದಕ್ಕೆ ಅವಕಾಶವಿತ್ತಿದೆ. ಆದರೆ ಚೀನಾ ಯಾವುದೇ ರಾಷ್ಟ್ರದ ಗಡಿಯಲ್ಲಿ ರಸ್ತೆ, ವಿಮಾನ ನಿಲ್ದಾಣ ನಿರ್ಮಾಣ ಅಥವಾ ಅಭಿವೃದ್ಧಿ ಯೋಜನೆಯ ಅನುಷ್ಟಾನಕ್ಕೆ ಮುಂದಾಗುತ್ತಿದೆ ಎಂದಾದರೆ, ಅದು ಆ ರಾಷ್ಟ್ರದ ಭೂಭಾಗವನ್ನೋ ,ಜಲಪ್ರದೇಶವನ್ನೋ ಕಬಳಿಸಲು ಹೊಂಚು ಹಾಕಿದೆ ಎಂದೇ ಅರ್ಥವೆಂದು ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.
ಈ ಮಧ್ಯೆ, ಚೀನಾ ಪ್ರಾಯೋಜಿತ ಬಹುಬಿಲಿಯ ಡಾಲರ್ ವೆಚ್ಚದ ನಗರಾಭಿವೃದ್ಧಿ ಯೋಜನೆಗಾಗಿ ,ಡೆವಲಪರ್‌ನನ್ನು ಅಂತಾರಾಷ್ಟ್ರೀಯ ಬಿಡ್ಡಿಂಗ್‌ನಲ್ಲಿ ಆಯ್ಕೆ ಮಾಡುವುದಕ್ಕಾಗಿ , ಅಂತಾರಾಷ್ಟ್ರೀಯ ಕನ್ಸಲ್ಟೆಂಟ್ ಓರ್ವನನ್ನು ಮ್ಯಾನ್ಮಾರ್ ಬಾಡಿಗೆಗೆ ನಿಯೋಜಿಸಿದೆ.

Latest Posts

ಸತೀಶ್ ನೀನಾಸಂ- ವಿಜಯ್ ಪ್ರಸಾದ್ ಕಾಂಬಿನೇಷನಲ್ಲಿ ಮತ್ತೊಂದು ಹೊಸ ಸಿನಿಮಾ, ಯಾವುದು ಗೊತ್ತಾ?

ಈಗಾಗಲೇ ಸತೀಶ್ ನೀನಾಸಂ ಮತ್ತು ’ಸಿದ್ಲಿಂಗು’ ಖ್ಯಾತಿಯ ವಿಜಯ್ ಪ್ರಸಾದ್ ಕಾಂಬಿನೇಷನ್ನಲ್ಲಿ ಎರಡು ಸಿನಿಮಾ ಬರಬೇಕಿತ್ತು. ಆದ್ರೆ, ಪ್ರಾಜೆಕ್ಟ್ ಟೇಕ್ ಆನ್ ಆಗಲಿಲ್ಲ. ಈಗ ಮೂರನೇ ಬಾರಿ ಸಿನಿಮಾ ಮಾಡಲು ಇಬ್ಬರು ಮನಸ್ಸು...

ಎಸ್‌ಪಿಬಿ ಆರೋಗ್ಯ ಸ್ಥಿತಿ ಗಂಭೀರ: ಗಾಯನ ಲೋಕದ ಗಂಧರ್ವನ ಚೇತರಿಕೆಗಾಗಿ ಅಭಿಮಾನಿಗಳಿಂದ ದೇವರಿಗೆ ಮೊರೆ

ಚೆನ್ನೈ: ಗಾಯನ ಲೋಕದ ಮಹಾನ್ ಪ್ರತಿಭೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದ್ದು, ಅವರ ಚೇತರಿಕೆಗಾಗಿ ದೇಶದ ಎಲ್ಲೆಡೆ ಕೋಟ್ಯಾಂತರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ನುರಿತ ವೈದ್ಯರುಗಳ ತಂಡ ಎಸ್‌ಪಿಬಿ ಆರೋಗ್ಯದ...

ಸಿಬಿಎಸ್‌ಇ 12ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶ ಅಕ್ಟೋಬರ್ 10ರ ಒಳಗೆ ಪ್ರಕಟ

ನವದೆಹಲಿ: ಸಿಬಿಎಸ್‌ಇ ೧೨ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶವನ್ನು ಅಕ್ಟೋಬರ್ ೧೦ರ ಒಳಗೆ ಪ್ರಕಟಿಸಲಾಗುವುದು ಎಂದು ಸಿಬಿಎಸ್‌ಇ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಸಿಬಿಎಸ್‌ಇ ಫಲಿತಾಂಶ ಅಧಿಕೃತ ಸಿಬಿಎಸ್‌ಇ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗಲಿದೆ. ಪೂರಕ ಪರೀಕ್ಷೆ ಹಾಗೂ...

ಡ್ರಗ್‌‌ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ: ಸಂಜನಾ, ರಾಗಿಣಿ ‘ಇಡಿ’ ವಿಚಾರಣೆಗೆ ಕೋರ್ಟ್ ಅಸ್ತು

ಬೆಂಗಳೂರು: ಸ್ಯಾಂಡಲ್‌‌ವುಡ್‌ ಡ್ರಗ್‌‌‌ ಪ್ರಕರಣ ದಿನದಿಂದ ದಿನಕ್ಕೆ ಹೊಸ ಆಯಾಮ ಪಡೆದುಕೊಳ್ಳುತ್ತಿದ್ದು, ನಟಿ ಸಂಜನಾ ಗಲ್ರಾನಿ ಹಾಗೂ ರಾಗಿಣಿ ದ್ವಿವೇದಿ ಸೇರಿದಂತೆ ಐವರು ಆರೋಪಿಗಳನ್ನು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ ಎನ್‌‌ಡಿಪಿಎಸ್‌‌‌ ವಿಶೇಷ...

Don't Miss

ಸತೀಶ್ ನೀನಾಸಂ- ವಿಜಯ್ ಪ್ರಸಾದ್ ಕಾಂಬಿನೇಷನಲ್ಲಿ ಮತ್ತೊಂದು ಹೊಸ ಸಿನಿಮಾ, ಯಾವುದು ಗೊತ್ತಾ?

ಈಗಾಗಲೇ ಸತೀಶ್ ನೀನಾಸಂ ಮತ್ತು ’ಸಿದ್ಲಿಂಗು’ ಖ್ಯಾತಿಯ ವಿಜಯ್ ಪ್ರಸಾದ್ ಕಾಂಬಿನೇಷನ್ನಲ್ಲಿ ಎರಡು ಸಿನಿಮಾ ಬರಬೇಕಿತ್ತು. ಆದ್ರೆ, ಪ್ರಾಜೆಕ್ಟ್ ಟೇಕ್ ಆನ್ ಆಗಲಿಲ್ಲ. ಈಗ ಮೂರನೇ ಬಾರಿ ಸಿನಿಮಾ ಮಾಡಲು ಇಬ್ಬರು ಮನಸ್ಸು...

ಎಸ್‌ಪಿಬಿ ಆರೋಗ್ಯ ಸ್ಥಿತಿ ಗಂಭೀರ: ಗಾಯನ ಲೋಕದ ಗಂಧರ್ವನ ಚೇತರಿಕೆಗಾಗಿ ಅಭಿಮಾನಿಗಳಿಂದ ದೇವರಿಗೆ ಮೊರೆ

ಚೆನ್ನೈ: ಗಾಯನ ಲೋಕದ ಮಹಾನ್ ಪ್ರತಿಭೆ ಎಸ್‌ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದ್ದು, ಅವರ ಚೇತರಿಕೆಗಾಗಿ ದೇಶದ ಎಲ್ಲೆಡೆ ಕೋಟ್ಯಾಂತರ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ. ನುರಿತ ವೈದ್ಯರುಗಳ ತಂಡ ಎಸ್‌ಪಿಬಿ ಆರೋಗ್ಯದ...

ಸಿಬಿಎಸ್‌ಇ 12ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶ ಅಕ್ಟೋಬರ್ 10ರ ಒಳಗೆ ಪ್ರಕಟ

ನವದೆಹಲಿ: ಸಿಬಿಎಸ್‌ಇ ೧೨ನೇ ತರಗತಿ ಪೂರಕ ಪರೀಕ್ಷೆ ಫಲಿತಾಂಶವನ್ನು ಅಕ್ಟೋಬರ್ ೧೦ರ ಒಳಗೆ ಪ್ರಕಟಿಸಲಾಗುವುದು ಎಂದು ಸಿಬಿಎಸ್‌ಇ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ. ಸಿಬಿಎಸ್‌ಇ ಫಲಿತಾಂಶ ಅಧಿಕೃತ ಸಿಬಿಎಸ್‌ಇ ವೆಬ್‌ಸೈಟ್‌ಗಳಲ್ಲಿ ಲಭ್ಯವಾಗಲಿದೆ. ಪೂರಕ ಪರೀಕ್ಷೆ ಹಾಗೂ...
error: Content is protected !!