ಈಗಿನ ದಿನಗಳಲ್ಲಿ ತಲೆನೋವು ಸಹಜ. ಏಕೆಂದರೆ ಬದುಕಿನ ಜಂಜಾಟಗಳು, ಕೆಲಸದ ಒತ್ತಡ, ಮೊಬೈಲ್, ಕಂಪ್ಯೂಟರ್ ಬಳಕೆ ಹೀಗಾಗಿ ತಲೆನೋವು ವಯಸ್ಸಿನ ಮಿತಿ ಇಲ್ಲದೇ ಬರುತ್ತದೆ. ತಲೆನೋವಿಗೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಸರಿಯಲ್ಲ. ಕೆಲವೊಂದು ಮನೆಮದ್ದುಗಳಿಂದಲೇ ಇದನ್ನು ಕಡಿಮೆ ಮಾಡಬಹುದು. ಇಲ್ಲಿ ತಲೆ ನೋವಿಗೆ ಒಂದು ಕಷಾಯ ಬರೆಯಲಾಗಿದೆ. ತಲೆನೋವು ಹೆಚ್ಚಾದಾಗ ಈ ಕಷಾಯ ಕುಡಿಯಿರಿ.
ಬೇಕಾಗುವ ಸಾಮಗ್ರಿ:
ಶುಂಠಿ
ಲಿಂಬು ರಸ
ಉಪ್ಪು
ದೊಡ್ಡಪತ್ರೆ ಎಲೆ
ನೀರು
ಮಾಡುವ ವಿಧಾನ:
ಮೊದಲಿಗೆ 2 ಕಪ್ ನೀರು ತೆಗೆದುಕೊಳ್ಳಿ.
ಅದಕ್ಕೆ ಅರ್ಧ ಇಂಚು ಉದ್ದದ ಶುಂಠಿಯನ್ನು ಜಜ್ಜಿ ಹಾಕಿ. ದೊಡ್ಡ ಪತ್ರೆ ಎಲೆ 4 ಕಟ್ ಮಾಡಿ ಹಾಕಿ. ಒಂದು ಚಮಚ ಉಪ್ಪು ಹಾಕಿ, 1 ಕಪ್ ಆಗುವವರೆಗೂ ಕುದಿಸಿ.
ಅದು ತಣ್ಣಗಾದಮೇಲೆ ಅದಕ್ಕೆ 2 ಚಮಚ ಲಿಂಬು ರಸ ಹಾಕಿರಿ.
ತಲೆನೋವು ಬಂದ ತಕ್ಷಣ ಈ ಕಷಾಯ ಕುಡಿಯಿರಿ. ಇದನ್ನು ಕುಡಿದರೆ ಪಿತ್ತದ ಸಮಸ್ಯೆಯೂ ನಿವಾರಣೆಯಾಗುತ್ತದೆ. ಅಜೀರ್ಣ ಸಮಸ್ಯೆಯೂ ಸರಿಯಾಗುತ್ತದೆ. ತಲೆನೋವು ಅರ್ಧಗಂಟೆಯಲ್ಲಿ ನಿವಾರಣೆಯಾಗುತ್ತದೆ.