ಮುಂಬೈ: ಮುಂಬೈನಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಈ ಘಟನೆ ಬಹಳ ಸುದ್ದಿಯಾಗಿದೆ. ಕೊರೋನಾ ಸೋಂಕು ತಗುಲಿದ್ದು, ಬಹಳ ದಿನ ಬದುಕಿರಲಾರೆ ಎಂದು ಪತ್ನಿಗೆ ಫೋನ್ ಮಾಡಿ ನಾಪತ್ತೆಯಾದ ನವೀ ಗರ್ಲ್ ಫ್ರೆಂಡ್ ಜೊತೆ ಪತ್ತೆಯಾಗಿದ್ದಾನೆ.
ಮುಂಬೈ ಮೂಲದ ೨೮ ವರ್ಷದ ನವೀ ಜುಲೈ ೨೪ರಂದು ತನ್ನ ಪತ್ನಿಗೆ ಫೋನ್ ಮಾಡಿ ತನಗೆ ಕೊರೋನಾ ಸೋಂಕು ತಗುಲಿದೆ, ನಾನು ಜಾಸ್ತಿ ದಿನ ಬದುಕುವುದಿಲ್ಲ ಎಂದು ಹೇಳಿ ಫೋನ್ ಕಟ್ ಮಾಡಿದ್ದಾನೆ. ಈ ಬಗ್ಗೆ ಅವನ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಬಗ್ಗೆ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದು, ಪೊಲೀಸರಿಗೆ ತನಿಖೆಯಲ್ಲಿ ಆರೋಪಿಗೆ ಅಕ್ರಮ ಸಂಬಂಧವಿರುವುದು ಹಾಗೂ ವ್ಯಕ್ತಿ ಇಂದೋರ್ನಲ್ಲಿರುವ ವಿಚಾರ ತಿಳಿಯಿತು..ವಾಶಿಯ ಪೊಲೀಸ್ ಅಧಿಕಾರಿಗಳ ತಂಡ ಇಂದೋರ್ಗೆ ತೆರಳಿ ನಾಪತ್ತೆಯಾದ
ವ್ಯಕ್ತಿಯನ್ನು ಗೆಳತಿಯೊಂದಿಗೆ ಸೆರೆ ಹಿಡಿದಿದ್ದಾರೆ. ಸೆ. 15ರಂದು ವ್ಯಕ್ತಿಯನ್ನು ಮುಂಬೈಗೆ ಕರೆ ತಂದಿದ್ದಾರೆ.