ಹೊಸ ದಿಗಂತ ಆನ್ ಲೈನ್ ಡೆಸ್ಕ್:
“ನಾನು ಭಾರತೀಯ ಪ್ರಜೆಯಾಗಿರುವುದು ನನ್ನ ಅದೃಷ್ಟ. ನನ್ನ ದೇಶದ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡುವುದರಲ್ಲಿ ನನಗೆ ಸಂತೋಷವಿದೆ”. ಆದರೆ ಜನರು ನನಗಾಗಿ “ಭಾರತ ರತ್ನ ಪ್ರಶಸ್ತಿ” ನೀಡುವಂತೆ ಬೇಡಿಕೆ ಇಟ್ಟಿರುವುದನ್ನು ನಿಲ್ಲಿಸಿ ಎಂದು ಖ್ಯಾತ ಉದ್ಯಮಿ ರತನ್ ಟಾಟಾ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಟಾಟಾ ಅವರಿಗೆ ಭಾರತ ರತ್ನ ನೀಡಿ ಎಂಬ ಕೂಗು ಹೆಚ್ಚಾಗುತ್ತಿದ್ದು, ಟ್ವಿಟರ್ನಲ್ಲಿ ಹಲವರು #BharatRatnaForRatanTata ಎಂಬ ಹ್ಯಾಶ್ ಟ್ಯಾಗ್ ಬಳಸಿ ಪ್ರಶಸ್ತಿ ನೀಡುವಂತೆ ಒತ್ತಾಯಿಸಿದ್ದಾರೆ.
ಇದಕ್ಕೆ ರತನ್ ಟಾಟಾ ಪ್ರತಿಕ್ರಿಯಿಸಿದ್ದು, “ಪ್ರಶಸ್ತಿಯ ವಿಷಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಭಾಗ ವ್ಯಕ್ತಪಡಿಸಿದ ಭಾವನೆಗಳನ್ನು ನಾನು ಪ್ರಶಂಸಿಸುತ್ತಿದ್ದರೂ, ಅಂತಹ ಅಭಿಯಾನಗಳನ್ನ ನಿಲ್ಲಿಸಬೇಕೆಂದು ವಿನಂತಿಸುತ್ತೇನೆ. ಬದಲಾಗಿ, ನಾನು ಭಾರತೀಯನಾಗಲು ಅದೃಷ್ಟ ಮಾಡಿದ್ದೇನೆ ಎಂದು ಭಾವಿಸುತ್ತೇನೆ. ಭಾರತದ ಬೆಳವಣಿಗೆ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ” ಎಂದು ಹೇಳಿದ್ದಾರೆ.