Thursday, August 11, 2022

Latest Posts

ತನಗೆ ಹುಟ್ಟುವ ಮಗು ಗಂಡೋ ಹೆಣ್ಣೋ ತಿಳಿಯಲು ಗರ್ಭಿಣಿ ಪತ್ನಿಯ ಉದರ ಸೀಳಿದ ಭೂಪ!

ಬದೌನ್ (ಉತ್ತರಪ್ರದೇಶ): ತನಗೆ ಹುಟ್ಟುವ ಮಗು ಗಂಡೋ, ಹೆಣ್ಣೋ ಎಂದು ತಿಳಿಯಲು ‘ತಂದೆ’ ತನ್ನ ಗರ್ಭಿಣಿ ಪತ್ನಿಯ ಹೊಟ್ಟೆ ಸೀಳಿದ ವಿಲಕ್ಷಣ ಘಟನೆ ಬದೌನ್ ಗ್ರಾಮದಲ್ಲಿ ನಡೆದಿದೆ.
ಪನ್ನಲಾಲ್ ಎಂಬ ಪಾಪಿ ಈ ಕೃತ್ಯ ವೆಸಗಿದ್ದು, ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸ್ ಆತಿಥ್ಯ ನೀಡಲಾಗಿದೆ. ಪನ್ನಲಾಲ್ ಈಗಾಗಲೇ ಐದು ಹೆಣ್ಣು ಮಕ್ಕಳ ತಂದೆಯಾಗಿದ್ದಾನೆ. ಮುಂದಿನ ಮಗು ಗಂಡು ಆಗಬೇಕೆಂದು ಹವಣಿಸುತ್ತಿದ್ದ. ಈ ಬಾರಿಯ ಮಗು ಗಂಡೋ ಅಥವಾ ಹೆಣ್ಣೋ ಎಂದು ತಿಳಿಯಲು ಇಂತಹಾ ವಿಲಕ್ಷಣ ದುಷ್ಕೃತ್ಯ ಎಸಗಿದ್ದಾನೆಂದು ಆರೋಪಿಸಲಾಗಿದೆ. ಹೊಟ್ಟೆ ಸೀಳಿಕೊಂಡ ಪರಿಣಾಮ ಗರ್ಭಿಣಿ ಮಹಿಳೆ ಗಂಭೀರ ಗಾಯಗೊಂಡಿದ್ದು, ಆಕೆಯನ್ನು ಬರೇಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss