ಬೀಜಿಂಗ್: ಕೊರೋನಾ ಸೋಂಕು ಪತ್ತೆ ದಿಶೆಯಲ್ಲಿ ಅಮೆರಿಕ ತನಿಖಾ ತಂಡದ ವುಹಾನ್ ಭೇಟಿಯನ್ನು ಚೀನಾ ಸಾರಾಸಗಟಾಗಿ ತಳ್ಳಿಹಾಕಿದೆ.
ಚೀನಾ ಸರ್ಕಾರದ ಈ ನಿಲವು ಎರಡು ಪ್ರಬಲ ದೇಶಗಳ ನಡುವಣ ನೇರ ಸಂಘರ್ಷಕ್ಕೆ ನಾಂದಿ ಹಾಡಿದೆ. ಭಾನುವಾರದ ರಾತ್ರಿಯಷ್ಟೇ ಅಮೆರಿಕಾ ರಾಷ್ಟ್ರಾಧ್ಯಕ್ಷ ಡೋನಾಲ್ಸ್ ಟ್ರಂಪ್, ವುಹಾನ್ಗೆ ತಜ್ಞರ ತಂಡವೊಂದನ್ನು ಕಳುಹಿಸಿ ತನಿಖೆ ಆರಂಭಿಸುವುದಾಗಿ ಹೇಳಿತ್ತು. ಆದರೆ ಚೀನಾ ಸೋಮವಾರ ಸಂಜೆ ಈ ದಿಶೆಯಲ್ಲಿ ಯಾವ ತನಿಖೆಯೂ ಅಗತ್ಯವಿಲ್ಲ. ಮಿಗಿಲಾಗಿ ಅಮೆರಿಕ ತನಿಖಾ ತಂಡ ವುಹಾನ್ ಒಳಗೆ ಕಾಲಿಡಲೂ ಅನುಮತಿ ನೀಡುವುದಿಲ್ಲ ಎಂಬರ್ಥದಲ್ಲಿ ಖಡಕ್ ಜವಾಬು ನೀಡಿದೆ. ಕೊರೋನಾ ಸೋಂಕು ವಿಚಾರದಲ್ಲಿ ಚೀನಾ ಕೂಡಾ ಒಂದು ಸಂತ್ರಸ್ತ ದೇಶವೇ ವಿನಹ ದೋಷಿಯಲ್ಲ ಎನ್ನುವ ಮೂಲಕ ಅಮರಿಕ ಜೊತೆ ಜಗಳಕ್ಕೆ ಕಾಲು ಕೆದರಿ ನಿಂತಿದೆ.