Sunday, June 26, 2022

Latest Posts

ಕೊರೋನಾ ಕಂಟಕ : ತನ್ನಂತೆ ಎತ್ತುಗಳಿಗೂ ಮಾಸ್ಕ್ ಹಾಕಿದ ಅನ್ನದಾತ!

ಬಾಗಲಕೋಟೆ: ಕೊರೋನಾ ಭೀತಿ ಮನುಕುಲಕ್ಕೆ ಎದುರಾಗಿರುವ ಮಧ್ಯೆದಲ್ಲೇ ಇಡೀ ದಿನದ ಬಿಸಿಲು,ನೆರಳನ್ನದೇ ಗದ್ದೆಯಲ್ಲಿ ದುಡಿಯುವ ರೈತ ಮತ್ತು ಎತ್ತುಗಳಿಗೂ ಕೊರೋನಾ ಭಯ ಕಾಡುತ್ತಿದೆ.

ಜಿಲ್ಲೆಯಲ್ಲಿ ಈಗಾಗಲೇ 14 ಜನರಿಗೆ ಸೋಂಕು ತಗುಲಿದ್ದು ಓರ್ವ ವೃದ್ದ ಕೂಡ ಸೋಂಕಿಗೆ ಬಲಿಯಾಗಿದ್ದಾನೆ. ಸೋಂಕಿತರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವುದು ಒಂದು ಕಡೆಯಾದರೆ ಸೋಂಕಿತ ವ್ಯಕ್ತಿಗಳ ನೆರೆಹೊರೆಯವರಿಗೆ ಸೋಂಕು ಅಂಟಿಕೊಂಡಿದೆ. ಬಾಗಲಕೋಟೆ ನಗರವನ್ನು ಸಿಲ್ಡೌನ್, ರೆಡ್ ಅಲರ್ಟ್ ಮಾಡಿ ಎಂದು ಆದೇಶ ಹೊರಡಿಸಿದ್ದಾರೆ.

ಹೀಗಾಗಿಯಾ ರೀತಿಯ ಕಾರ್ಯಗಳು ನಗರದಲ್ಲಿ ನಡೆಯುತ್ತಿಲ್ಲ. ದೇಶದಲ್ಲಿ ಜೀವ ಉಳಿದರೆ ಸಾಕು ಎನ್ನುತ್ತಿದ್ದಾರೆ. ಆದರೆ, ಉತ್ತರ ಕರ್ನಾಟಕದಲ್ಲಿ ರೈತನ ಕಾರ್ಯ ಮಾತ್ರ ನಿಂತಿಲ್ಲ. ಎಲ್ಲರಿಗೂ ಅನ್ನ ಹಾಕುವ ಕಾರ್ಯದಲ್ಲಿ ರೈತ ನಿರತನಾಗಿದ್ದಾನೆ.

ಮುಂಜಾಗ್ರತಾ ಕ್ರಮವಾಗಿ ಗದ್ದನಕೇರಿ ಕ್ರಾಸ್ ಹತ್ತಿರ ಕಲಾದಗಿ ಗ್ರಾಮ ಮಾರ್ಗದ ರಸ್ತೆ ಬದಿಯ ಕೃಷಿ ಜಮೀನಿನಲ್ಲಿ ರೈತ ಪ್ರಕಾಶ  ಗೌರಿ ಎಂಬಾಂತ ತಾನು ಮಾಸ್ಕ್ ಧರಿಸುವ ಜತೆಗೆ ತನಗೆ ಬೆನ್ನಲುಬಾಗಿರುವ ಬಸವಣ್ಣನಿಗೂ (ಎತ್ತುಗಳಿಗೆ)ಗೋಣಿ ಚೀಲದ ಮಾಸ್ಕ್ ಹಾಕಿದ್ದು ನೋಡಿದರೆ ಕೊರೋನಾದಿಂದ ಪ್ರಾಣಿಗಳನ್ನು ರಕ್ಷಿಸುವತ್ತಾ ರೈತರು ಮುಂದಾಗಿದ್ದಾರೆ.

ಗೋಣಿ ಚೀಲಕ್ಕೆ ಕಸಿಕಟ್ಟಿ ಅದನ್ನು ಮಾಸ್ಕ್ ರೂಪದಲ್ಲಿ ತಯಾರಿಸಿ ಎತ್ತುಗಳಿಗೆ ಕಟ್ಟುವ ಮೂಲಕ ಇನ್ನೋಳಿದ ರೈತರಿಗೆ ಮಾರ್ಗದರ್ಶನ ನೀಡಿದ್ದಾರೆ. ಇವರ ಈ ಕಾರ್ಯಕ್ಕೆ ಹಲವರು ನಗೆ ಬೀರಿದರೇ, ಇನ್ನೂ ಕೆಲವರು ಜಾನಾವಾರಗಳನ್ನು ತನ್ನಷ್ಟೇ ರೈತ ಪ್ರೀತಿಸುತ್ತಾನೆ ಎಂಬುದನ್ನು ತೋರಿಸಿಕೊಟ್ಟಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss