Sunday, August 14, 2022

Latest Posts

ತನ್ನನ್ನು ಗುರುತಿಸಿಲ್ಲ ಎಂಬ ಸಿಟ್ಟಲ್ಲಿ ಲೇಡಿ ಪೊಲೀಸ್ ಗೆ ಟ್ರಾಫಿಕ್ ಡ್ಯೂಟಿ ಕೊಟ್ಟ ಡಿಸಿಪಿ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಅಧಿಕಾರದ ದರ್ಪದಿಂದ ಉನ್ನತ ಅಧಿಕಾರಿಯನ್ನು  ಗುರುತಿಸದೆ, ದಾರಿಯಲ್ಲೇ ತಡೆದರೆಂಬ ಸಿಟ್ಟಿನಿಂದ ಪೊಲೀಸ್ ಸಿಬ್ಬಂದಿಗೆ ಟ್ರಾಫಿಕ್ ವಿಭಾಗದಲ್ಲಿ ಕೆಲಸ ಮಾಡುವಂತೆ ಲೇಡಿ ಡಿಸಿಪಿ  ಶಿಕ್ಷೆ ನೀಡಿದ್ದಾರೆ.

ಹೌದು, ಕೇರಳದ ಕೊಚ್ಚಿಯಲ್ಲಿ ನಿಷ್ಠೆಯಿಂದ ಕೆಲಸ ಮಾಡುವುದಾಗಿ ಹೇಳಿಕೊಂಡು ಜ. 1ರಂದು ಡಿಸಿಪಿ ಆಗಿ ಐಶ್ವರ್ಯಾ ಅಧಿಕಾರ ವಹಿಸಿಕೊಂಡಿದ್ದಾರೆ. ಬಳಿಕ ಅವರು  ಇನ್ಸ್ಪೆಕ್ಷನ್ ಗಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಗೆ ತೆರಳಿದ್ದಾರೆ. ಆದರೆ ಈ ವೇಳೆ ಅವರು ಪೊಲೀಸ್ ಸಮವಸ್ತ್ರವನ್ನು ಧರಿಸದೆ, ಸಾಮಾನ್ಯ ಬಟ್ಟೆಯಲ್ಲೇ ಹೋಗಿದ್ದಾರೆ.

ಮಾಸ್ಕ್ ಧರಿಸಿ, ಠಾಣೆಗೆ ಕಾಲಿಟ್ಟ ಇವರನ್ನು ಮಹಿಳಾ ಪೊಲೀಸ್ ಸಿಬ್ಬಂದಿಯೊಬ್ಬರು ದಾರಿಯಲ್ಲೇ ತಡೆದು, ಏನಾಗಬೇಕಿತ್ತು ಎಂದು ಕೇಳಿದ್ದಾರೆ.

ಇದರಿಂದ ಸಿಟ್ಟಾದ  ಡಿಸಿಪಿ,  ಉನ್ನತ ಹುದ್ದೆಯಲ್ಲಿರುವ ನನ್ನನ್ನು ಗುರುತಿಸದೆ, ದಾರಿಯಲ್ಲೇ ತಡೆದರೆಂಬ ಸಿಟ್ಟಿನಿಂದ ಸಿಬ್ಬಂದಿಗೆ ಎರಡು ದಿನಗಳ ಕಾಲ ಟ್ರಾಫಿಕ್ ವಿಭಾಗದಲ್ಲಿ ಕೆಲಸ ಮಾಡುವ ಶಿಕ್ಷೆ ನೀಡಲಾಗಿದೆ.
ಪೊಲೀಸರೆಂದ ಮೇಲೆ ಯಾವಾಗಲೂ ಅವರು ಅಲರ್ಟ್ ಆಗಿರಬೇಕು. ಉನ್ನತ ಅಧಿಕಾರಿಗಳ ಬಗ್ಗೆಯೂ ಮಾಹಿತಿ ಇರಬೇಕು. ಆದರೆ ಈ ಸಿಬ್ಬಂದಿಗೆ   ಮಾಹಿತಿ ಇಲ್ಲದ ಹಿನ್ನೆಲೆಯಲ್ಲಿ ಶಿಕ್ಷೆ ನೀಡಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಆದರೆ ಪ್ರಸ್ತುತ ಮಾಸ್ಕ್ ಧರಿಸಿದಾಗ ನಮ್ಮವರನ್ನೇ ಗುರುತಿಸುವುದು ಕಷ್ಟ. ಹೀಗಿರುವಾಗ ಅವರನ್ನು ಗುರುತಿಸುವುದು ಸಿಬ್ಬಂದಿಗೆ ಕಷ್ಟವಾಗಿದೆ. ಕೊರೋನಾ ಹಿನ್ನೆಲೆ ವಿನಾ  ಕಾರಣದಿಂದ ಠಾಣೆಗೆ ಹೆಚ್ಚು ಜನರು ಬರುವಂತಿಲ್ಲ ಎನ್ನುವ ನಿಯಮವಿದ್ದು, ಅದರಿಂದಾಗಿಯೇ ವಿಚಾರಣೆ ಮಾಡಿದ್ದಾಗಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.  ಈ ಕಾರಣದಿಂದ ಅಧಿಕಾರ ವಹಿಸಿಕೊಂಡು 15 ದಿನಗಳೊಳಗೆ ಇಂತಹ ಶಿಕ್ಷೆ ನೀಡುವುದು ತಪ್ಪಾಗುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss