Sunday, August 14, 2022

Latest Posts

ತನ್ನೊಡನೆ ಇತರ ಮಕ್ಕಳು ಆಟವಾಡುತ್ತಿಲ್ಲವೆಂದು ಪೊಲೀಸ್ ಕಂಪ್ಲೇಂಟ್ ಕೊಟ್ಟ 8ರ ಬಾಲಕ!

ಕೋಯಿಕ್ಕೋಡ್: ಎಂಟರ ಹರಯದ ಬಾಲಕನೊಬ್ಬ ತನ್ನೊಡನೆ ಇತರ ಮಕ್ಕಳು ಆಟವಾಡುತ್ತಿಲ್ಲವೆಂದು ಪೊಲೀಸರಿಗೇ ದೂರು ನೀಡಿದ ಹಾಸ್ಯಮಯ ಘಟನೆ ವರದಿಯಾಗಿದೆ.
ಘಟನೆ ಕೇರಳದ ಕೋಯಿಕ್ಕೋಡ್ ನಲ್ಲಿ ನಡೆದಿದೆ.
ಐವರು ಹುಡುಗಿಯರ ವಿರುದ್ಧ ಆತ ಈ ದೂರು ನೀಡಿದ್ದಾನೆ. ಅದರಲ್ಲಿ ಒಬ್ಬಾಕೆ ಆತನ ಅಕ್ಕ. ಲಾಕ್‌ಡೌನ್ ಅವಧಿಯಲ್ಲಿ ಈ ಹುಡುಗಿಯರು  ಶಟಲ್, ಕಳ್ಳ ಪೋಲೀಸ್, ಲೂಡೋ ಆಡುವಾಗ ತನ್ನನ್ನು ಸೇರಿಸಿಕೊಳ್ಳುತ್ತಿಲ್ಲ , ತನ್ನನ್ನು ಗದರುತ್ತಿದ್ದಾರೆ ಎಂದು ಆತ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.
ಆತ ಈ ಕುರಿತಂತೆ ಆತನ ಅಪ್ಪನಲ್ಲಿ ದೂರಿದಾಗ ಅವರು ಹಾಸ್ಯಮಯವಾಗಿ “ನೀನು ಪೊಲೀಸ್ ಕಂಪ್ಲೇಂಟ್ ಕೊಡು” ಎಂದು ಹೇಳಿದ್ದನ್ನೆ ಗಂಭೀರವಾಗಿ ಪರಿಗಣಿಸಿದ ಬಾಲಕ , ಪೊಲೀಸರಿಗೆ ಲಿಖಿತ ದೂರು ನೀಡಿದ್ದಾನೆ. ಪಕ್ಕದ ಮನೆಗೆ ಬೇರಾವುದೋ ದೂರನ್ನು ವಿಚಾರಿಸಲು ಪೊಲೀಸರು ಬಂದಿದ್ದಾಗ ಈ ಬಾಲಕ ಅವರನ್ನು ಭೇಟಿಯಾಗಿ ತನ್ನ ದೂರು ಸಲ್ಲಿಸಿದ. ಅದರಂತೆ ಆತನ ಮನೆಗೆ ಭೇಟಿ ನೀಡಿದ ಪೊಲೀಸರು ಆತನನ್ನು ಕೂಡ ಆಟಕ್ಕೆ ಸೇರಿಸುವಂತೆ ಹುಡುಗಿಯರ ಮನವೊಲಿಸಿದ ಬೆಳವಣಿಗೆಯೂ ನಡೆಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss