Tuesday, July 5, 2022

Latest Posts

ತನ್ನ ಚುನಾವಣಾ ಚಿಹ್ನೆ ಟ್ರ್ಯಾಕ್ಟರ್ ಏರಿ ಮತಯಾಚಿಸಿದ ಬಿಜೆಪಿ ಬೆಂಬಲಿತ ಅಭ್ಯರ್ಥಿ

ಹೊಸದಿಗಂತ ವರದಿ, ಕೋಲಾರ:

ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಮತದಾರರು ಆಯ್ಕೆ ಮಾಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಿ ಎಂದು ಸಂಸದ ಎಸ್. ಮುನಿಸ್ವಾಮಿ ಅವರ ಧರ್ಮ ಪತ್ನಿ ಎಂ. ಶೈಲಜಾ ಮನವಿ ಮಾಡಿದರೆ ಅಭ್ಯರ್ಥಿ ಅಶ್ವಥ್ಥಗೌಡ ತನ್ನ ಚುನಾವಣಾ ಚಿಹ್ನೆ ಯಾದ ಟ್ರ್ಯಾಕ್ಟರ್ ಏರಿ ಮತಯಾಚಿಸಿ ಗಮನ ಸೆಳೆದರು.
ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಗ್ರಾಪಂ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಸಂಸದರ ಪತ್ನಿ ಶೈಲಜಾ, ಗ್ರಾಮದಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಬಿಜೆಪಿ ಅಭ್ಯರ್ಥಿಗೆ ಮತ ನೀಡಿ, ಗ್ರಾಪಂ ಸದಸ್ಯರ ಗಮನಕ್ಕೆ ತರುವ ನಿಟ್ಟಿನಲ್ಲಿ ಸಮಸ್ಯೆಗಳನ್ನು ಬಗೆಹರಿಸುವ ಕಾರ್ಯವನ್ನು ಮಾಡಲಾಗುತ್ತದೆ ಎಂದರು.
ಕಲ್ಲೂರು ಗ್ರಾಮದ ಗ್ರಾಪಂ ಬಿಜೆಪಿ ಬೆಂಬಲಿತ ಹಾಗೂ ಬಿಜೆಪಿ ರೈತ ಮೋರ್ಚಾ ತಾಲೂಕು ಅಧ್ಯಕ್ಷ ಎಸ್. ಅಶ್ವಥಗೌಡ ಮಾತನಾಡಿ, ಗ್ರಾಮದ ಗ್ರಾಮಸ್ಥರ ನೀರಿನ ಸಮಸ್ಯೆಯನ್ನು ಬಗೆಹರಿಯುವರೆಗೂ ಗ್ರಾಮದಲ್ಲಿ ಇರುತ್ತೇನೆ. ಜತೆಗೆ ಗ್ರಾಪಂ ಚುನಾವಣೆಯ ನಂತರ ಕೊಳವೆ ಬಾವಿ ಕೊರೆಸುವ ಬಗ್ಗೆ ಸಂಸದ ಎಸ್ ಮುನಿಸ್ವಾಮಿ ಅವರು ಭರವಸೆ ನೀಡಿರುವ ಮಾತಿನಂತೆ ನಡೆದುಕೊಳ್ಳುತ್ತಾರೆ. ಹೀಗಾಗಿ ಗ್ರಾಪಂ ಚುನಾವಣೆಯಲ್ಲಿ ಟ್ರ್ಯಾಕ್ಟರ್ ಗುರ್ತಿಗೆ ಮತವನ್ನು ಗ್ರಾಮದ ಮತದಾರರು ನೀಡಬೇಕು ಎಂದು ಮನವಿ ಮಾಡಿದರು.
ಗ್ರಾಮದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡದೇ ಹಳ್ಳಿಯ ಪ್ರಗತಿಯಾಬೇಕಾದರೆ ರಾಜಕಾರಣವನ್ನು ಒಟ್ಟಿಗೆ ಸೇರಿ ಮಾಡೋಣ ಎಂದು ತಿಳಿಸಿದರು.
ಕಲ್ಲೂರು ಗ್ರಾಮವನ್ನು ತಾಲೂಕಿನಲ್ಲಿ ಅಭಿವೃದ್ಧಿಪಡಿಸಿ ಮಾದರಿ ಗ್ರಾಮವನ್ನಾಗಿ ಮಾಡಿ ಕೋಲಾರ ತಾಲೂಕಿನಲ್ಲಿ ನಂಬರ್ ಒನ್ ಆಗಿ ಮಾಡಲು ಸಂಕಲ್ಪವನ್ನು ಹೊಂದಿದ್ದು, ಆಶ್ವಾಸನೆಗಳನ್ನು ಈಡೇರಿಸುವ ಕಾರ್ಯವನ್ನು ಮಾಡಲು ಮತ ನೀಡಿ ಎಂದು ಮನವಿ ಮಾಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಸಿ. ಡಿ. ರಾಮಚಂದ್ರಪ್ಪ, ಬಿಜೆಪಿ ನಗರ ಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎನ್. ಕೆ ಮಂಜುನಾಥ್, ಸಿ. ಮಂಜುನಾಥ್, ಬಿಜೆಪಿ ತಾಲೂಕು ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಓಹಿಲೇಶ್, ಸಿಂಗೊಂಡಹಳ್ಳಿ ಎಸ್.ಪಿ ಗೋವಿಂದರಾಜು, ಬಿಜೆಪಿ ತಾಲೂಕು ಉಪಾಧ್ಯಕ್ಷ ಯಳಚೀಪುರ ಕುಮಾರ್, ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ಮಂಜುಳಮ್ಮ, ಶಕುಂತಲಾ, ಮಂಜುಳಾದೇವಿ, ವಿಜಯಲಕ್ಷ್ಮಿ, ಹೇಮಲತಾ, ಸೇಲ್ವಮ, ಅಂಬುಜಾ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss