Sunday, August 14, 2022

Latest Posts

ತಪಾಸಣೆಗಾಗಿ ತಡೆದ ಪೊಲೀಸ್ ಗೆ ಡಿಕ್ಕಿಹೊಡೆಸಿ ಕಾರಿನ ಬಾನೆಟ್ ಮೇಲೆ ಹೊತ್ತೊಯ್ದ ಚಾಲಕ!

ಹೊಸದಿಗಂತ ಆನ್‌ಲೈನ್ ಡೆಸ್ಕ್:  

ಮಾಸ್ಕ್ ಧರಿಸದ ಕಾರು ಚಾಲಕನನ್ನು ತಡೆಯತ್ನಿಸಿದ ಕರ್ತವ್ಯ ನಿರತ ಸಂಚಾರಿ ಪೊಲೀಸ್ ಗೆ ಡಿಕ್ಕಿಹೊಡೆದು ಬಾನೆಟ್ ಮೇಲೆ ಹೊತ್ತೊಯ್ದ ಘಟನೆ ಪುಣೆಯ ಪಿಂಪ್ರಿ ಚಿಂಚ್ವಾಡ ಎಂಬಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ.

ಚಿಂಚ್ವಾಡ ಪರಿಸರದಲ್ಲಿ ಸಂಚಾರ ಪೊಲೀಸರು ಮಾಸ್ಕ್ ಧರಿಸದೇ ಪ್ರಯಾಣಿಸುತ್ತಿರುವವರನ್ನು ಗುರುತಿಸಿ ದಂಡ ವಿಧಿಸುವ ಕೆಲಸ ಮಾಡುತ್ತಿದ್ದರು. ಇದೇ ವೇಳೆ, ಈ ಕಾರಿನಲ್ಲಿ ಬಂದವರು ಮಾಸ್ಕ್ ಧರಿಸದೇ ಇರುವ ಒಬ್ಬರನ್ನು ಗಮನಿಸಿ ನಿಲ್ಲಿಸುವುದಕ್ಕಾಗಿ ಕಾರಿನ ಎದುರು ಹೋಗಿದ್ದಾರೆ. ಕಾರು ಚಾಲಕ ಸಂಚಾರಿ ಪೊಲೀಸ್ಗೆ ಕಾರನ್ನು ಡಿಕ್ಕಿಹೊಡೆದಿದ್ದಲ್ಲದೆ ಪೊಲೀಸ್ ಕಾರಿನ ಬಾನೆಟ್ ಮೇಲೆ ಬಿದ್ದರೂ ನಿಲ್ಲಿಸದೇ ಹಾಗೆಯೇ ಅವರನ್ನು ಹೊತ್ತುಕೊಂಡು ಮುಂದಿನ ಸಿಗ್ನಲ್ ತನಕ ಕಾರು ಚಲಾಯಿಸಿದ್ದಾನೆ. ಕೆಲವು ಬೈಕ್ ಸವಾರರು ಕಾರನ್ನು
ನಿಲ್ಲಿಸುವ ಪ್ರಯತ್ನ ಮಾಡಿರುವ ದೃಶ್ಯವೂ ವಿಡಿಯೋದಲ್ಲಿದೆ.

ಈ ಬಗ್ಗೆ ಆರೋಪಿ ಯುವರಾಜ್ ಹನುವತೆ (49) ಎಂಬಾತನ ವಿರುದ್ಧ ಪಿಂಪ್ರಿ ಚಿಂಚ್ವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss