ಶಿವಮೊಗ್ಗ: ಕೋವಿಡ್ 19 ಹಸಿರು ವಲಯದಲ್ಲಿದ್ದ ಮಲೆನಾಡಿಗೆ ಕೊರೋನಾ ಅಂಟಿಸಿದ ತಬ್ಲಿಘಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದರು ಎಂಬ ಆಘಾತಕಾರಿ ಅಂಶ ಹೊರಬಿದ್ದಿದೆ.
ಗುಜರಾತ್ ನ ಅಹಮದಾಬಾದ್ ನಿಂದ ಆಗಮಿಸಿದ ತಬ್ಲಿಘಿಗಳನ್ನು ಶನಿವಾರ ಮೊದಲು ಶಿವಮೊಗ್ಗ ನಗರದ ಬಾಪೂಜಿ ನಗರದ ಹಾಸ್ಟೆಲ್ ನಲ್ಲಿ ಇರಿಸಲಾಗಿತ್ತು. ನಂತರ ಸಂಜೆ ವೇಳೆಗೆ ಅವರನ್ನು ಮಲ್ಲಿಗೇನಹಳ್ಳಿ ಹಾಸ್ಟೆಲ್ ಗೆ ಸ್ಥಳಾಂತರಿಸಲಾಯಿತು. ಈ ವೇಳೆ ಇಬ್ಬರು ತಬ್ಲಿಘಿಗಳು ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ನಂತರ ಅವರನ್ನು ಸಬ್ ಇನ್ಸ್ಪೆಕ್ಟರ್ ಬಂಧಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸುದ್ದಿಗೋಷ್ಟಿಯಲ್ಲಿ ವಿವರಿಸಿದರು.
ತಬ್ಲಿಘಿಗಳು ಆರಂಭದಿಂದಲೂ ಆಡಳಿತಕ್ಕೆ ದೇಶಾದ್ಯಂತ ಅಸಹಕಾರ ನೀಡುತ್ತಿದ್ದಾರೆ. ಶಿವಮೊಗ್ಗ ದಲ್ಲೂ ಅದನ್ನೇ ಮಾಡಿದ್ದಾರೆ. ಇಂತಹವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ತಬ್ಲಿಘಿಗಳು ಧರ್ಮಾಭಿಮಾನಿಗಳು ಆಗಿರುವುದರಿಂದ, ಅವರನ್ನು ಮದರಸ ಅಥವಾ ದರ್ಗಾಗಳಲ್ಲಿ ಕ್ವಾರಂಟೈನ್ ಮಾಡಿ ಪ್ರಾರ್ಥನೆ ಇತ್ಯಾದಿಗಳಿಗೂ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು.