ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ ಪ್ರಕರಣಕ್ಕ ಎಸಂಬಂಧಿಸಿದಂತೆ ನಿರೂಪಕ ಅಕುಲ್ ಬಾಲಾಜಿಗೆ ಸಿಸಿಬಿ ಪೊಲೀಸರು ನೊಟೀಸ್ ನೀಡಿದ್ದು, ಇದೀಗ ಸಿಸಿಬಿ ಕಚೇರಿಗೆ ಅಕುಲ್ ಬಾಲಾಜಿ ಆಗಮಿಸಿ ತನಿಖೆಗೆ ಸಂಪೂರ್ಣ ಸಹಕಾರ ಇದೆ ಎಂದಿದ್ದಾರೆ.
ನನಗೂ ಈ ಡ್ರಗ್ಸ್ ಪಾರ್ಟಿಗಳಿಗೂ ಸಂಬಂಧ ಇಲ್ಲ, ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ತಪ್ಪೇ ಮಾಡಿಲ್ಲದಾಗ ಹೆದರುವುದೇನಿದೆ ಎಂದು ಅಕುಲ್ ಬಾಲಾಜಿ ಹೇಳಿದ್ದಾರೆ.
ಸಿಸಿಬಿ ಕೇಳುವ ಎಲ್ಲಾ ಪ್ರಶ್ನೆಗೂ ಉತ್ತರಿಸುತ್ತೇನೆ. ನನಗು ಇದಕ್ಕೂ ಸಂಬಂಧ ಇಲ್ಲ. ಆರೋಪಿಗಳು ನನ್ನ ಹೆಸರು ಹೇಳಿದ್ದಾರೆ. ಅಷ್ಟಕ್ಕೂ ಆರೋಪಿಗಳ ಪರಿಚಯವೇ ನನಗಿಲ್ಲ ಎಂದಿದ್ದಾರೆ. ನನ್ನ ಫಾರ್ಮ್ ಹೌಸ್ನಲ್ಲಿ ಡ್ರಗ್ ಪಾರ್ಟಿ ನಡೆದಿದೆ ಎನ್ನಲಾಗಿದೆ. ಆದರೆ ಈ ರೀತಿ ಪಾರ್ಟಿ ನಾನು ಮಾಡಿಲ್ಲ. ಇದಕ್ಕೂ ನನಗು ಯಾವ ಸಂಬಂಧವೂ ಇಲ್ಲ ಎಂದು ಅಕುಲ್ ಹೇಳಿದ್ದಾರೆ.