Thursday, July 7, 2022

Latest Posts

ತಬ್ಲಿ ಜಮಾತ್ ಸಭೆಗೆ ನೆಲಮಂಗಲ ತಾಲೂಕಿನ ಐದು ಜನ: ಕುಟುಂಬ ಸದಸ್ಯರಿಗೆ ಹೋಮ್ ಕ್ವಾರಂಟೈನ್‌

ಜಮಾತ್ ಭೇಟಿ: ಐವರು ಆಸ್ಪತ್ರೆಗೆ
ನೆಲಮಂಗಲ: ತಬ್ಲಿ ಜಮಾತ್ ಸಭೆಗೆ ತಾಲೂಕಿನ ಐದು ಜನರು ಹೋಗಿರುವುದು ತಿಳಿದ ಬೆನ್ನಲ್ಲೆ ಮನೆಯಿಂದ ರಾಜೀವ್‌ಗಾಂಧಿ ಆಸ್ಪತ್ರೆಗೆ ದಾಖಲಿಸಿ ರಕ್ತಪರೀಕ್ಷೆ ನಡೆಸಲಾಗುತ್ತಿದೆ.
ತಾಲೂಕಿನ ಲಕ್ಕೂರಿನ ಮೂರು ಜನ ಹಾಗೂ ಚಂದನ ಹೊಸಹಳ್ಳಿಯ ಇಬ್ಬರು ಮಾಚ್೧ ರಿಂದ ೧೫ ರವರಗೂ ದೆಹಲಿಯ ನಿಜಮುದ್ದೀನ್‌ಮರ್ಕಾಜ್ ಮಸೀದಿಯಲ್ಲಿ ನಡೆದ ತಬ್ಲಿ ಜಮಾತ್ ಸಭೆಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಇದರ ಪರಿಣಾಮ ಮಂಗಳವಾರ ರಾತ್ರಿ ಸರಕಾರಿ ಆಸ್ಪತ್ರೆಗೆ ಕರೆತಂದು ಅವರ ಕುಟುಂಬ ಸದಸ್ಯರಿಗೆ ಹೋಮ್ ಕ್ವಾರಂಟೈನ್‌ನಲ್ಲಿರಿಸಲಾಗಿದ್ದು ೨೮ಕ್ಕೂ ಹೆಚ್ಚು ಜನರನ್ನು ಲಾಕ್ ಮಾಡಲಾಗಿದೆ.
ಗ್ರಾಮದಲ್ಲಿ ಆತಂಕ :
ತಾಲೂಕಿನ ಐದು ಜನರನ್ನು ಆಸ್ಪತ್ರೆಗೆ
ದಾಖಲಿಸುವ ಮೂಲಕ ರಕ್ತಪರೀಕ್ಷೆ ನಡೆಸಲಾಗುತಿದ್ದು ಕೊರೊನಾ ಇರುವ ಬಗ್ಗೆ ಖಚಿತ ಮಾಹಿತಿ ಬಂದಿಲ್ಲ. ಆದರೆ  ಇವರು ಪಟ್ಟಣ ಹಾಗೂ ಗ್ರಾಮದಲ್ಲಿ ಓಡಾಟ ನಡೆಸಲಾಗಿರುವುದರಿಂದ ಜನರು ಆತಂಕ ವ್ಯಕ್ತಪಡಿಸಿದ್ದಾರೆ.
ಯಾವುದೇ ಸಮಸ್ಯೆ ಇಲ್ಲ :
ತಬ್ಲಿ ಜಮಾತ್ ಸಭೆಗೆ ಭಾಗಿಯಾಗಿದ್ದ ತಾಲೂಕಿನ ಐದು ಜನರನ್ನು ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಪರೀಕ್ಷೆಗಾಗಿ ರಾಜೀವ್‌ಗಾಂಧಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಮನೆಯವರ ಮೇಲೆ ನಿಗಾವಹಿಸಲಾಗಿದೆ. ಮುಂಜಾಗ್ರತೆಯಾಗಿ ಸಂಪರ್ಕಕ್ಕೆ ಬಂದವರ ಬಗ್ಗೆಯೂ ಮಾಹಿತಿ ಸಗ್ರಹಿಸಲಾಗುತ್ತಿದೆ ಎಂದು ತಹಶೀಲ್ದಾರ್‌ತಿಳಿಸಿದರು.
ಮನೆಯಿಂದ ಹೊರಬರಬೇಡಿ :
ತಾಲೂಕಿನ ಜನರು ಲಾಕ್‌ಡೌನ್ ಆದೇಶ ಮುಗಿಯುವವರೆಗೂ ಮನೆಯಿಂದ ಹೊರಬರದೆ ಕೊರೊನಾದ ಬಗ್ಗೆ ಎಚ್ಚರಿಕೆ ವಹಿಸಿ ನೀವು ಹಾಗೂ ಕುಟುಂಬವನ್ನು ರಕ್ಷಿಸಿಕೊಳ್ಳಬೇಕು. ಮನೆಯಿಂದ ಸುಖಸುಮ್ಮನೆ ಹೊರಬರಬಾರದು ಬಂದರೆ ಕ್ರಮಕೈಗೊಳ್ಳಲಾಗುತ್ತದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss