Thursday, June 30, 2022

Latest Posts

ತಬ್ಲೀಗ್ ಸಮ್ಮೇಳನದ ಕುರಿತು ರಾಜ್ಯ ಸರಕಾರ ಹೆದರಿ ಮೌನವಹಿಸಿದೆ: ಕೆ. ಸುರೇಂದ್ರನ್ ಆರೋಪ

ತಿರುವನಂತಪುರ: ತಬ್ಲಿಕ್ ಸಮ್ಮೇಳನದ ಕುರಿತು ಮಾತನಾಡದೆ ರಾಜ್ಯಸರಕಾರ ಮೌನವಹಿಸಿದೆ. ಇದು ಮತೀಯ ವಿಚಾರವಲ್ಲ.ತಬ್ಲಿಕ್ ಸಮ್ಮೇಳನದಲ್ಲಿ ಪಾಲ್ಗೊಂಡ ಕೇರಳೀಯರ ರೂಟ್ ಮ್ಯಾಪ್ ಹೊರಹಾಕಲು ಸರಕಾರವು ತಯಾರಾಗಿಲ್ಲ ಎಂದು ಬಿಜೆಪಿ ಕೇರಳ ರಾಜ್ಯ ಆಧ್ಯಕ್ಷ ಕೆ.ಸುರೇಂದ್ರನ್ ಆರೋಪಿಸಿದರು.
1000 ರೂಪಾಯಿಯ ಆಹಾರ ಕಿಟ್ ವಿತರಿಸುವುದಾಗಿ ಹೇಳಿದ ಸರಕಾರವು ಕಮ್ಯೂನಿಟಿ ಕಿಚನ್ ಗೆ ಹಣನೀಡುತ್ತಿಲ್ಲ. ಕಮ್ಯೂನಿಟಿ ಕಿಚನ್ ನ ಮರೆಯಲ್ಲಿ ಸಿಪಿಎಂ ರಾಜಕೀಯದ ಆಟವನ್ನು ಆಡುತ್ತಿದೆ. ಮುಖ್ಯಮಂತ್ರಿ ಹೇಳಿದ ಯಾವುದೇ ಕಾರ್ಯಗಳು ಅನುಷ್ಠಾನಗೊಂಡಿಲ್ಲ.
ರಾಜ್ಯದಲ್ಲಿರುವ ಅನವಶ್ಯಕ ಕ್ಯಾಬಿನೆಟ್ ಪದವಿಗಳನ್ನು ತೆರವುಗೊಳಿಸಬೇಕು. ಮುಖ್ಯಮಂತ್ರಿ, ಸಚಿವರು ಹಾಗೂ ಶಾಸಕರ ಸಂಬಳವನ್ನು ಕಡಿತಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಸೇವಾಭಾರತಿ ಹಾಗೂ ಬಿಜೆಪಿ ಕಾರ್ಯಕರ್ತರ ಸೇವಾಕಾರ್ಯವನ್ನು ತಡೆಯಲು ಸರಕಾರವು ಹವಣಿಸುತ್ತಿರುವುದು ಖಂಡನೀಯ. ಅದಕ್ಕೆ ನಾವು ಆಸ್ಪದವನ್ನು ಕೊಡುವುದಿಲ್ಲ ಎಂದರು.
ಕೋರೋನ ಆತಂಕದ ನಡುವೆಯೂ ಕೇಂದ್ರ ಸರಕಾರದ ವಿರುದ್ಧ ಸರಕಾರವು ಪಿತೂರಿ ನಡೆಸುತ್ತಿದೆ. ಕೇಂದ್ರ ಸರಕಾರವು ನೀಡಿದ ನಾಲ್ಕು ಸಾವಿರ ಕೋಟಿ ರೂಪಾಯಿಯಲ್ಲಿ ಕೇವಲ 2,000 ಕೋಟಿ ರೂಪಾಯಿಯನ್ನು ಈತನಕ ಖರ್ಚು ಮಾಡಲಾಗಿದೆ. ಆರ್ಥಿಕ ಸ್ಥಿತಿಯ ಸಮತೋಲನಕ್ಕಾಗಿ ಕೇಂದ್ರ ಸರಕಾರವು 1277 ಕೋಟಿ ರೂಪಾಯಿಯನ್ನು ಕೇರಳ ಸರಕಾರಕ್ಕೆ ನೀಡಿದೆ. ಇದರ ಬಗ್ಗೆ ಹಣಕಾಸು ಸಚಿವ ಥೋಮಸ್ ಐಸಾಕ್ ಮಾತನಾಡುತ್ತಿಲ್ಲ. 667.5 ಕೋಟಿ ರೂಪಾಯಿ ಉದ್ಯೋಗ ಖಾತರಿ ವಿಭಾಗಕ್ಕೆ ನೀಡಲಾಗಿದೆ. 396 ಕೋಟಿ ರೂಪಾಯಿಗಳನ್ನು ಸಾಮಾಗ್ರಿಗಳ ಖರೀದಿಗಾಗಿ ಕೇಂದ್ರ ಸರಕಾರವು ನೀಡಿದೆ. ಈ ಹಣವನ್ನು ರಾಜ್ಯ ಸರಕಾರವು ತನ್ನ ಖಜಾನೆಗೆ ವರ್ಗಾಯಿಸಿದೆ ಎಂದು ಕೆ ಸುರೇಂದ್ರನ್ ಆರೋಪಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss