ತಮಿಳು ಸಿನಿರಂಗದ ಖ್ಯಾತ ನಿರ್ಮಾಪಕ ಎಸ್ ಕೆ ಕೃಷ್ಣನಾಥ್ ಅವರು ಹೃದಯಾಘಾತದಿಂದ ನಿನ್ನೆ ರಾತ್ರಿ ನಿಧನ ಹೊಂದಿದ್ದಾರೆ. ಅವರಿಗೆ ೫೨ ವರ್ಷ ವಯಸ್ಸಾಗಿತ್ತು. ಧನುಶ್, ಸೂರ್ಯಾ, ಚಿಯಾನ್ ವಿಕ್ರಂ, ಸಿಂ ಧು ಇನ್ನೂ ಹಲವು ಖ್ಯಾತ ಸಿನಿಮಾ ನಟರುಗಳ ಸಿನಿಮಾಗಳನ್ನು ನಿರ್ಮಿಸಿದ್ದ ಎಸ್ ಕೆ. ಕೃಷ್ಣನಾಥ್ ಅವರ ಹಠಾತ್ ನಿ‘ನಕ್ಕೆ ತಮಿಳು ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ.
ಧನುಶ್ ನಟಿಸಿದ್ದ ತಿರುಡಾ-ತಿರುಡಿ, ಚಿಯಾನ್ ವಿಕ್ರಂ ನಟನೆಯ ’ಕಿಂಗ್’, ಸಿಂಧು ನಟನೆಯ ’ಮನ್ಮಥನ್’ ಇನ್ನೂ ಹಲವು ಸಿನಿಮಾಗಳನ್ನು ಎಸ್ ಕೆ ಕೃಷ್ಣನ್ ನಿರ್ಮಾಣ ಮಾಡಿದ್ದರು. ಎಸ್.ಕೆ ಕೃಷ್ಣನ್ ಕೆಲವು ವಾರಗಳಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.