ಹೊಸದಿಗಂತ ಆನ್ ಲೈನ್ ಡೆಸ್ಕ್:
ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಆರ್ಭಟ ತೋರಿಸಲು ಮುಂದಾಗಿದ್ದ ಶಶಿಕಲಾ ನಟರಾಜನ್ಗೆ ಅಣ್ಣಾ ಡಿಎಂಕೆ ಸರ್ಕಾರ ಮತ್ತೊಮ್ಮೆ ಶಾಕ್ ನೀಡಿದೆ.
ಶಶಿಕಲಾ ಸಂಬಂಧಿಗಳಾದ ಇಳವರಸಿ ಮತ್ತು ಸುಧಾಕರನ್ ಹೆಸರಲ್ಲಿದ್ದ ಭಾರಿ ಮೌಲ್ಯದ ಆಸ್ತಿಗಳನ್ನು ಜಪ್ತಿ ಮಾಡಿದೆ. ತೂತ್ತುಕುಡಿ ಜಿಲ್ಲೆಯಲ್ಲಿ 800 ಎಕರೆ ಭೂಮಿಯನ್ನು ರಾಜ್ಯ ಸರ್ಕಾರದ ವತಿಯಿಂದ ಜಪ್ತಿ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಪಳನಿಸ್ವಾಮಿ ನೇತೃತ್ವದ ರಾಜ್ಯ ಸರಕಾರ ತಮಿಳುನಾಡಿನಾದ್ಯಂತ ಶಶಿಕಲಾ ನಟರಾಜನ್ಗೆ ಸೇರಿದ ಕೋಟ್ಯಾಂತರ ರೂಪಾಯಿ ಜಮೀನುಗಳ ಜಪ್ತಿ ಮಾಡಿದೆ. ಇತ್ತೀಚಿಗೆ ಚೆನ್ನೈನಲ್ಲಿ 6 ಕಡೆಗಳಲ್ಲಿ ನೂರಾರು ಕೋಟಿ ಆಸ್ತಿಗಳನ್ನು ಜಪ್ತಿ ಮಾಡಿತ್ತು.