ಚೆನ್ನೈ : ಒಂದೆಡೆ ಕೊರೋನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆ ತಮಿಳುನಾಡು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಕೊರೋನಾ ಸುರಕ್ಷತಾ ಕ್ರಮಗಳೊಂದಿಗೆ ನವೆಂಬರ್ 16ರಿಂದ 9ರಿಂದ ಕಾಲೇಜಿನವರೆಗೆ ಶಾಲಾ-ಕಾಲೇಜು ತೆರೆಯುವುದಾಗಿ, ನವೆಂಬರ್ 10ಕ್ಕೆ ಸಿನಿಮಾ ಥಿಯೇಟರ್ ಓಪನ್ ಮಾಡುತ್ತಿರುವುದಾಗಿ ಘೋಷಿಸಿದೆ.
ಈಗಾಗಲೇ ಕೇಂದ್ರ ಸರ್ಕಾರ ಶಾಲಾ ಕಾಲೇಜು ತೆರೆಯುವುದು ಹಾಗೂ ಸಿನಿಮಾ ಮಂದಿರಗಳನ್ನು ತೆರೆಯುವ ಬಗ್ಗೆ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಬಿಟ್ಟಿತ್ತು. ಇದರಿಂದಾಗಿ ತಮಿಳುನಾಡು ಸರ್ಕಾರ ನವೆಂಬರ್ 10ರಿಂದ ಕೊರೋನಾ ಸುರಕ್ಷತಾ ಕ್ರಮಗಳೊಂದಿಗೆ ಶೇ.50ರಷ್ಟು ಆಸನ ವ್ಯವಸ್ಥೆಯೊಂದಿಗೆ ಸಿನಿಮಾ ಥಿಯೇಟರ್ ತೆರೆಯಲಿದ್ದೇವೆ ಎಂಬುದಾಗಿ ಘೋಷಿಸಿದೆ.
ಇನ್ನು ನ.16ರಿಂದ ಶಾಲಾ-ಕಾಲೇಜು ರಾಜ್ಯದಲ್ಲಿ ಓಪನ್ ಮಾಡುವುದರ ಜೊತೆಗೆ ಧಾರ್ಮಿಕ, ಸಮುದಾಯ ಮತ್ತು ಸಾಂಸ್ಕೃತಿಕ ಕೂಟಗಳಿಗೆ ಅವಕಾಶ ನೀಡಲಾಗುವುದು. ಮದುವೆ, ಅಂತ್ಯಕ್ರಿಯೆಗಳಲ್ಲಿ 100 ಮಂದಿ ಅತಿಥಿಗಳು ಇರಬಹುದು.
ಮೃಗಾಲಯಗಳು, ಮನರಂಜನೆ ಮತ್ತು ಮನರಂಜನಾ ಪಾರ್ಕ್ ಗಳು ಮತ್ತು ವಸ್ತುಸಂಗ್ರಹಾಲಯಗಳಿಗೆ ನವೆಂಬರ್ 10ರಿಂದ ಅನುಮತಿ ನೀಡಲಾಗುವುದು ಎಂದು ಸರ್ಕಾರ ತಿಳಿಸಿದ್ದು, ಮಾರ್ಚ್ ನಿಂದ ಜಾರಿಗೆ ಬಂದಿರು ಲಾಕ್ ಡೌನ್ ಅನ್ನು ಸಡಿಲಗೊಳಿಸುವುದಾಗಿ ತಿಳಿಸಿದೆ.
ಅನುಸರಿಸಬೇಕಾದ ಸುರಕ್ಷತಾ ನಿಯಮಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಸಾನಿಟೈಸರ್ ಗಳ ಬಳಕೆ, ದೇಹದ ಉಷ್ಣತೆಯನ್ನು ಪರೀಕ್ಷಿಸಲು ಸಾಮಾಜಿಕ ಡಿಸ್ಟಿಂಕಿಂಗ್ ಮತ್ತು ಥರ್ಮಲ್ ಸ್ಕ್ಯಾನ್ ಗಳನ್ನು ಬಳಸುವುದು ಸೇರಿವೆ. ಹೊಸ ನಿಯಮಗಳು ನಿಯಂತ್ರಣ ವಲಯಗಳಿಗೆ ಅನ್ವಯಿಸುವುದಿಲ್ಲ ಎಂದು ಸರ್ಕಾರ ಹೇಳಿದೆ.