spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, September 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ತಮಿಳುನಾಡಿನಲ್ಲಿ ನಾಡಬಾಂಬ್ ದಾಳಿ: ಓರ್ವ ಪೊಲೀಸ್ ಸಿಬ್ಬಂದಿ ಸಾವು

- Advertisement -Nitte

ಚೆನ್ನೈ: ತಮಿಳುನಾಡಿನಲ್ಲಿ ನಾಡಬಾಂಬ್ ದಾಳಿ ನಡೆದಿದ್ದು, ಓರ್ವ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ.
ತಮಿಳಿನ ತೂತ್ತುಕ್ಕುಡಿ ಜಿಲ್ಲೆಯ ದಕ್ಷಿಣ ಭಾಗದ ಮನಕ್ಕರೈ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ ನಾಡಬಾಂಬ್‍ ದಾಳಿ ನಡೆದಿತ್ತು.
ಗ್ರಾಮದಲ್ಲಿ ಅಪರಾಧಿಯೊಬ್ಬನನ್ನು ಬಂಧಿಸಲು ಹೋದಾಗ ಪೋಲೀಸ್ ಮೇಲೆ ಅಪರಾಧಿ ನಾಡಬಾಂಬ್ ಎಸೆದಿದ್ದಾನೆ.
ರೌಡಿ ಶೀಟರ್ ದೊರೈ ಮುತ್ತು ಇಲ್ಲಿನ ಮನಕಾರೈ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ಬಾಂಬ್ ಎಸೆದಿದ್ದು ಹಾಗೆ ಎಸೆಯುವ ವೇಳೆ ಅವನ ಕೈಗೆ ಗಾಯಗಳಾಗಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎರಡು ಕೊಲೆ ಪ್ರಕರಣಗಳು ಮುತ್ತು ವಿರುದ್ಧ ಬಾಕಿ ಉಳಿದಿದ್ದು, ವಿಶೇಷ ತಂಡವು ಮಾಹಿತಿಯನ್ನು ಅನುಸರಿಸಿ ಪ್ರದೇಶಕ್ಕೆ ಆಗಮಿಸಿತ್ತು. ಪೊಲೀಸ್ ತಂಡಕ್ಕೆ ಎಸೆದ ಎರಡು ಬಾಂಬ್‌ಗಳಲ್ಲಿ, ಎರಡನೆಯದು ಸ್ಫೋಟಗೊಂಡು, ಕಾನ್‌ಸ್ಟೆಬಲ್‌ಗೆ ತಲೆಗೆ ಮಾರಣಾಂತಿಕವಾಗಿ ಗಾಯವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss