ಚೆನ್ನೈ: ಸೆ.30 ವರೆಗೆ ತಮಿಳುನಾಡು ಸರ್ಕಾರ ಲಾಕ್ ಡೌನ್ ನ್ನು ವಿಸ್ತರಣೆ ಮಾಡಿದ್ದು, ಆದರೆ ನಿರ್ಬಂಧಗಳಲ್ಲಿ ಮತ್ತಷ್ಟು ಸಡಿಲಗೊಳಿಸಿದೆ.
ಸಾರ್ವಜನಿಕರಿಗೆ ದೇವಾಲಯ ಪ್ರವೇಶವನ್ನು ಮುಕ್ತಗೊಳಿಸಲಾಗುತ್ತದೆ. ಚೆನ್ನೈ ನಲ್ಲಿ ಎಂಟಿಸಿ ಬಸ್ ಗಳ ಸಂಚಾರ ಸೆ.1 ರಿಂದ, ಸೆ.07 ರಿಂದ ಮೆಟ್ರೋ ಸಂಚಾರ ಪ್ರಾರಂಭವಾಗಲಿದೆ.
ಶಾಪಿಂಗ್ ಮಾಲ್ ಗಳು, ಶೋ ರೂಮ್ ಗಳು, ದೊಡ್ಡ ಸ್ಟೋರ್ ಗಳು ಶೇ.100 ರಷ್ಟು ನೌಕರರೊಂದಿಗೆ ಕಾರ್ಯನಿರ್ವಹಣೆ ಮಾಡಬಹುದಾಗಿದ್ದು ರಾತ್ರಿ 8 ರವರೆಗೆ ತೆರೆಯಲು ಅನುಮತಿ ನೀಡಲಾಗಿದೆ. ಐಟಿ ಸಂಸ್ಥೆಗಳಿಗೂ ಸಹ ಶೇ.100 ರಷ್ಟು ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಣೆ ಮಾಡುವುದಕ್ಕೆ ಅನುಮತಿ ನೀಡಲಾಗಿದೆ.
ತಮಿಳುನಾಡು ಸರ್ಕಾರದ ಮೂಲಗಳ ಪ್ರಕಾರ ಸೆ.1 ರಿಂದ ಭಾನುವಾರದಂದು ಸಂಪೂರ್ಣ ಲಾಕ್ ಡೌನ್ ನ್ನು ತೆಗೆದುಹಾಕಲಾಗುತ್ತದೆ.
ಹೊಟೇಲ್ , ರೆಸಾರ್ಟ್, ರಿಕ್ರಿಯೇಷನ್ ಕ್ಲಬ್, ಪಾರ್ಕ್, ಪ್ಲೇ ಗ್ರೌಂಡ್ ಗಳ ಕಾರ್ಯನಿರ್ವಹಣೆಗೆ ಅನುಮತಿ, ಸರ್ಕಾರಿ ಕಚೇರಿಗಳಲ್ಲಿ ಶೇ.100 ರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯನಿರ್ವಹಣೆ ಮಾಡಲು ಸೆ.30 ರಿಂದ ಅನುಮತಿ ನೀಡಲಾಗುತ್ತದೆ.
ಆದರೆ ಸೆ.30 ವರೆಗೆ ಧಾರ್ಮಿಕ ಸಭೆಗಳು, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ, ಶೈಕ್ಷಣಿಕ ಸಭೆಗಳನ್ನು ನಿರ್ಬಂಧಿಸಲಾಗಿದೆ.