Wednesday, August 17, 2022

Latest Posts

ತಮಿಳುನಾಡಿನ ಬಟ್ಟೆ ಅಂಗಡಿಯಲ್ಲಿ ಸೀರೆ ಉಟ್ಟ ರೋಬೊಟ್ ನೀಡಲಿದೆ ಸ್ಯಾನಿಟೈಸರ್!

ತಮಿಳುನಾಡು: ಯಾವುದೇ ಅಂಗಡಿ ಮಾಲ್‌ಗೆ ಹೋದರೆ ಪ್ರವೇಶದ್ವಾರದಲ್ಲಿ ಸಿಬ್ಬಂದಿ ನಮ್ಮ ಟೆಂಪರೇಚರ್ ಚೆಕ್ ಮಾಡುವುದು, ಸ್ಯಾನಿಟೈಸರ್ ನೀಡುವುದು ಸಾಮಾನ್ಯ ಆದರೆ ತಿರುಚಿರಾಪಲ್ಲಿಯ ಸೀರೆ ಅಂಗಡಿಯೊಂದರಲ್ಲಿ ಈ ಎಲ್ಲ ಕೆಲಸಗಳನ್ನು ಸೀರೆ ಉಟ್ಟ ರೋಬೋಟ್ ಮಾಡುತ್ತಿದೆ.
ಹೌದು, ಈ ರೋಬೋಟ್ ಹೆಸರು ಝಾಫಿರಾ, ಈ ರೋಬೊಟ್‌ನ ಸಹಾಯದಿಂದ ದಿನಕ್ಕೆ ಎಷ್ಟು ಕಸ್ಟಮರ್‌ಗಳು ಬರುತ್ತಾರೆ ಎಂಬುದರ ಲೆಕ್ಕ ಇಡಲಾಗುತ್ತದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನಿಂದ ಕೆಲಸ ಮಾಡುವ ಈ ರೋಬೋಟ್ ಜನ ಮಾಸ್ಕ್ ಹಾಕಿದ್ದಾರೋ ಇಲ್ಲವೋ, ಇವರ ಟೆಂಪರೇಚರ್ ಎಷ್ಟಿದೆ ಎಂದು ಚೆಕ್ ಮಾಡುತ್ತದೆ. ಸ್ಯಾನಿಟೈಸರ್ ಕೂಡ ನೀಡುತ್ತದೆ.
ಕೊರೋನಾ ಆರಮಭವಾದ ಸಮಯದಿಂದಲೇ ರೋಬೋಟ್‌ಗಳನ್ನು ತಯಾರಿಸಲಾಗುತ್ತಿತ್ತು. ಇವುಗಳ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನಿಂದ ಪ್ರತಿ ದಿನ ಬರುವವರ ಮಾಹಿತಿ ಇ-ಮೇಲ್ ಮೂಲಕ ಮಾಲೀಕರಿಗೆ ತಲುಪಿಸಲಾಗುತ್ತದೆ ಎಂದು ರೊಬೊಟ್ ತಯಾರಕ ಆಶಿಕ್ ರೆಹಮಾನ್ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!